ವಿದೇಶ

ಭಾರತದ ವಿರುದ್ದ ತಾಲಿಬಾನಿಗಳನ್ನು ಎತ್ತಿ ಕಟ್ಟುತ್ತಿರುವ ಪಾಕಿಸ್ತಾನ

Shilpa D

ವಾಷಿಂಗ್ಟನ್‌ : ಹೆಚ್ಚುತ್ತಿರುವ ಭಾರತದ ಪ್ರಭಾವವನ್ನು ಕುಗ್ಗಿಸುವ ಸಲುವಾಗಿ ಪಾಕಿಸ್ಥಾನ, ತಾಲಿಬಾನ್‌ ಉಗ್ರರನ್ನು ಬಳಸಿಕೊಳ್ಳುತ್ತಿದೆ ಎಂಬ ವಿಷಯ ಬಹಿರಂಗವಾಗಿದೆ.

ಸಿಐಎ ನಿರ್ದೇಶಕ ಜಾನ್‌ ಬ್ರೆನ್ನನ್‌ ಅವರ ಖಾಸಗಿ ಇ-ಮೇಲ್‌ಗ‌ಳನ್ನು ಹ್ಯಾಕ್‌ ಮಾಡಲ್ಪಟ್ಟಿದ್ದು. ಅವುಗಳಲ್ಲಿರುವ ಈ ಆಘಾತಕಾರಿ ಅಂಶವನ್ನು ಆಂಗ್ಲ ಪತ್ರಿಕೆ ಬಹಿರಂಗಗೊಳಿಸಿದೆ. ಜಾನ್ ಬ್ರೆನ್ನನ್‌ ಅವರು ಬರೆದಿರುವ ಈ ಟಿಪ್ಪಣಿಗಳನ್ನು ಅಮೆರಿಕವು ವರ್ಗೀಕೃತ ರಹಸ್ಯ ದಾಖಲೆ ಪತ್ರಗಳೆಂದು ಗುರುತಿಸಿತ್ತು.

ಬರಾಕ್‌ ಒಬಾಮಾ ಅವರು 2008ರ ನವೆಂಬರ್‌ನಲ್ಲಿ ಅಮೆರಿರ ಅಧ್ಯಕ್ಷರಾಗಿ ಚುನಾಯಿತರಾದಾಗ ಬ್ರೆನ್ನನ್‌ ಅವರು "ಪಾಕಿಸ್ಥಾನವು ಅಫ್ಘಾನಿಸ್ಥಾನದಲ್ಲಿ ಭಾರತದ ಪ್ರಭಾವವನ್ನು ತಗ್ಗಿಸುವ ಕುಟಿಲೋಪಾಯದ ಕ್ರಮವಾಗಿ ತಾಲಿಬಾನ್‌ ಉಗ್ರ ಸಂಘಟನೆಯನ್ನು ಬಳಸಿಕೊಳ್ಳುತ್ತಿದೆ' ಎಂಬ ವಿಷಯವನ್ನು ಒಬಾಮಾಗೆ ರಹಸ್ಯ ಇ-ಮೇಲ್‌ಗ‌ಳ ಮೂಲಕ ತಿಳಿಸಿದ್ದರು ಎಂದು ಆಂಗ್ಲ ಪತ್ರಿಕೆ ತಿಳಿಸಿದೆ.

ಅಫ್ಘಾನಿಸ್ಥಾನದಲ್ಲಿನ ಅಮೆರಿಕದ ದೀರ್ಘಾವಧಿ ಹಿತಾಸಕ್ತಿಗಳು ಪಾಕಿಸ್ಥಾನಕ್ಕೆ ಆತಂಕ ಉಂಟು ಮಾಡಿದ್ದವು. .ಅಮೆರಿಕವು ಒಂದೊಮ್ಮೆ ಅಫ್ಘಾನಿಸ್ಥಾನದಿಂದ ನಿರ್ಗಮಿಸಿದರೆ ಆ ಬಳಿಕದಲ್ಲಿ ಇರಾನ್‌ ಮತ್ತು ಭಾರತೀಯ ಹಿತಾಸಕ್ತಿಗಳ ನಡುವೆ ಒಂದು ಸಂತುಲನೆಯನ್ನು ಸಾಧಿಸಬೇಕೆಂಬ ಕುಟಿಲೋಪಾಯವನ್ನು ಪಾಕಿಸ್ಥಾನ ರೂಪಿಸಿತ್ತು. ಆ ಪ್ರಕಾರ ಅದು ತನ್ನ ಈ ಉದ್ದೇಶಕ್ಕಾಗಿ ತಾಲಿಬಾನ್‌ ಉಗ್ರ ಸಂಘಟನೆಯನ್ನು ಪಾಕಿಸ್ತಾನ ಬಳಸಿಕೊಂಡಿತ್ತು.  ಬ್ರೆನ್ನನ್‌ ಅವರ ಹ್ಯಾಕ್‌ ಮಾಡಲ್ಪಟ್ಟ ರಹಸ್ಯ ಇ-ಮೇಲ್‌ಗ‌ಳನ್ನು ಉಲ್ಲೇಖೀಸಿ  ಈ ಅಂಶಗಳನ್ನು ಬಹಿರಂಗಪಡಿಸಲಾಗಿದೆ. .
 

SCROLL FOR NEXT