ಅಥೆನ್ಸ್: ಸುಮಾರು 3,500 ವರ್ಷಗಳ ಹಿಂದಿನ ಕಾಲದಲ್ಲಿದ್ದ ಯೋಧನ ಅಸ್ತಿ ಪಂಜರ ಮತ್ತು ಭಾರಿ ನಿಧಿಯನ್ನು ಅಮೇರಿಕಾದ ಪುರಾತತ್ವ ತಜ್ಞರು ಪತ್ತೆ ಹಚ್ಚಿದ್ದಾರೆ.
ಗ್ರೀಸ್ ನಲ್ಲಿ ಈ ಶೋಧ ನಡೆಸಿದ್ದು, ಅಸ್ತಿ ಪಂಜರದ ಜೊತೆಗೆ ಬಹಳ ಬೆಲೆಯುಳ್ಳ ಚಿನ್ನದ ಆಭರಣಗಳು ದೊರೆತಿವೆ. ಈ ಯೋಧ ಧರಿಸಿದ್ದ ಉಂಗುರ, ಹವಳ, ಮುತ್ತುನಿಂದ ಮಾಡಿರುವಂತದ್ದು, ದಂತ ಮತ್ತು ಚಿನ್ನದಿಂದ ಮಾಡಿದಂತಹ ಸರ ಸೇರಿದಂತೆ ಕಂಚು, ಬೆಳ್ಳಿಯ ಆಭರಣಗಳು ಸಿಕ್ಕಿವೆ. ಈ ಚಿನ್ನದ ಆಭರಣಗಳನ್ನು ಮಿನಾನ್ಸ್ ಶೈಲಿಯಲ್ಲಿ ಮಾಡಲಾಗಿದೆ.
ಮರದ ಶವಪೆಟ್ಟಿಗೆಯಲ್ಲಿ ಈ ಯೋಧನ ಶವವನ್ನು ಇಡಲಾಗಿತ್ತು. ಆದರೆ, ಈತ ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಅಸ್ತಿಪಂಜರದೊಂದಿಗೆ ಇಷ್ಟೊಂದು ಬೆಲೆ ಬಾಳುವ ಆಭರಣಗಳು ಸಿಕ್ಕಿವೆ ಎಂದರೆ ಇತಿಯಾಸ ಅಧ್ಯಯನದ ವಿಷಯದಲ್ಲಿ ಈತನ ಶವ ಬಹಳ ಮಹತ್ವದಾಗಿದೆ ಎಂದು ತಜ್ಞರು ಹೇಳಿದ್ದಾರೆ.