ಈಜಿಪ್ಟ್ ಬಳಿ ರಷ್ಯಾ ವಿಮಾನ ಪತನ: 5 ಮಕ್ಕಳು ಸೇರಿ 100 ಪ್ರಯಾಣಿಕರ ಶವ ಪತ್ತೆ
ಈಜಿಪ್ಟ್ ನ ಸಿಯಾನ್ ಬಳಿ ರಷ್ಯಾದ- A 321 ಏರ್ ಬಸ್ ಪತನಗೊಂಡಿದ್ದು, ಐವರು ಮಕ್ಕಳು ಸೇರಿ 100 ಪ್ರಯಾಣಿಕರ ಸಾವನ್ನಪ್ಪಿದ್ದಾರೆ.
ಕೈರೋ: ಈಜಿಪ್ಟ್ ನ ಸಿಯಾನ್ ಬಳಿ ರಷ್ಯಾದ- A 321 ಏರ್ ಬಸ್ ಪತನಗೊಂಡಿದ್ದು, ವಿಮಾನದಲ್ಲಿದ್ದ 224 ಪ್ರಯಾಣಿಕರ ಪೈಕಿ ಐವರು ಮಕ್ಕಳು ಸೇರಿ 100 ಪ್ರಯಾಣಿಕರ ಸಾವನ್ನಪ್ಪಿದ್ದಾರೆ.
ಈಜಿಪ್ಟ್ ನಿಂದ ರಷ್ಯಾಗೆ ತೆರಳಬೇಕಿದ್ದ ವಿಮಾನ ಈಜಿಪ್ಟ್ ನಿಂದ ಟೇಕ್ ಆಫ್ ಅದ ಕೆಲವೇ ನಿಮಿಷಗಳಲ್ಲಿ ಟ್ರಾಫಿಕ್ ಕಂಟ್ರೋಲ್ ನ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿತ್ತು. ನಾಪತ್ತೆಯಾಗಿದ್ದ ವಿಮಾನ ಈಜಿಪ್ಟ್ ನ ಸಿಯಾನ್ ಬಳಿ ಪತನವಾಗಿರುವುದನ್ನು ಈಜಿಪ್ಟ್ ನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪತನಗೊಂಡಿರುವ ವಿಮಾನದಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಾಚಾರಣೆ ನಡೆಯುತ್ತಿದ್ದು, ಈ ವರೆಗೂ ರಕ್ಷಣಾ ಸಿಬ್ಬಂದಿ ನಾಲ್ವರನ್ನು ರಕ್ಷಿಸಿದ್ದಾರೆ.
ಪತನಗೊಂಡ ವಿಮಾನದಲ್ಲಿ ಬಹುತೇಕ ರಷ್ಯಾ ಪ್ರವಾಸಿಗರಿದ್ದರು. ಈಜಿಪ್ಟ್ ನ ಶರ್ಮ್ ಎಲ್ ಶೇಕ್ ನ ರೆಡ್ ಸಿ ರೆಸಾರ್ಟ್ ನಿಂದ ರಷ್ಯಾಗೆ ತೆರಳುತ್ತಿದ್ದ ವಿಮಾನ, ಟೇಕ್ ಆಫ್ ಅದ ಕೆಲವೇ ನಿಮಿಷಗಳಲ್ಲಿ ರೆಡಾರ್ ನ ಸಂಪರ್ಕ ಕಳೆದುಕೊಂಡಿತ್ತು ಎಂದು ಏರ್ ಟ್ರಾಫಿಕ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪತನಗೊಳ್ಳುವುದಕ್ಕೂ ಮುನ್ನ ಈಜಿಪ್ಟಿನ ವಾಯುಪ್ರದೇಶವನ್ನು ದಾಟಿತ್ತು ಎಂದು ಹೇಳಲಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.