ವಿದೇಶ

ಗರ್ಭಪಾತಕ್ಕೊಳಗಾದ ಮಹಿಳೆಯರಿಗೆ ಕ್ಷಮೆ ಇರಲಿ

Vishwanath S

ವ್ಯಾಟಿಕನ್ ಸಿಟಿ: ಕ್ಯಾಥೊಲಿಕ್ ಚರ್ಚ್ ನ ಸಂಪ್ರದಾಯವಾದಿಗಳ ಭಾವನೆಗೆ ವಿರುದ್ಧವಾಗಿ ಹೇಳಿಕೆ ನೀಡಿರುವ ಪೋಪ್ ಫ್ರಾನ್ಸಿಸ್, ಗರ್ಭಪಾತಕ್ಕೊಳಗಾದ ಮಹಿಳೆಯರನ್ನೂ, ಅವರಿಗೆ ಗರ್ಭಪಾತ ಶಸ್ತ್ರ ಚಿಕಿತ್ಸೆ ನಡೆಸುವ ವೈದ್ಯರನ್ನೂ ಕ್ಷಮಿಸಬೇಕೆಂದು ಧರ್ಮಗುರುಗಳಿಗೆ ಸಲಹೆ ಮಾಡಿದ್ದಾರೆ.

ಧರ್ಮ ಗುರುಗಳಿಗೆ ಬರೆದಿರುವ ಪತ್ರದಲ್ಲಿ ಈ ಸಲಹೆ ಮಾಡಿರುವ ಅವರು, ಈ ವರ್ಷದ ಡಿಸೆಂಬರ್ 8 ರಿಂದ 2016ರ ನವೆಂಬರ್ 20ರವರೆಗೆ ನಡೆಯುವ ಕ್ಷಮೆಯ ವರ್ಷ ಪ್ರಯುಕ್ತ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ. ಆ ದುರಂತವನ್ನು ಅನುಭವಿಸುವ ನೋವುಂಡ ಹೆಣ್ಣಿಗೆ ಸಾಂತ್ವನಬೇಕು. ಈ ಘಟನೆ ಅವರಲ್ಲಿ ಅಳಿಸಲಾಗದ ಗಾಯ ಮಾಡಿರುತ್ತದೆ. ಹೆಣ್ಣು ತುಂಬ ನೋವಿನಿಂದ ಈ ನಿರ್ಧಾರ ತೆಗೆದುಕೊಂಡಿರುತ್ತಾಳೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಪೋಪ್ ಪತ್ರದ ಬಗ್ಗೆ ಸ್ಪಷ್ಟನೆ ನೀಡಿರುವ ವ್ಯಾಟಿಕನ್ ಸಿಟಿ, ಪೋಪ್ ಅವರು ಗರ್ಭಪಾತ ಸಾಮಾಜಿಕ ಪಿಡುಗು ಎಂದು ಹೇಳಿಲ್ಲ. ಇದು ಕೇವಲ ತಾತ್ಕಾಲಿಕ ನಿರ್ಧಾರ. ಒಂದು ವರ್ಷದ ಅವಧಿಗೆ ಮಾತ್ರ ಇದು ಅನ್ವಯ ಎಂದಿದೆ.

SCROLL FOR NEXT