ಬೀಜಿಂಗ್: ಅಂತರಾಷ್ಟ್ರೀಯ ವಿಷಯಗಳ ಮೇಲೆ ಪಾಕಿಸ್ತಾನ ಮತ್ತು ಚೈನಾದ ಸಹಕಾರ ಸಂಬಂಧ ವೃದ್ಧಿಗೆ ಚೈನಾ ರಾಷ್ಟ್ರಪತಿ ಕ್ಸಿ ಜಿನ್ಪಿಂಗ್ ಮತ್ತು ಪಾಕಿಸ್ತಾನ ರಾಷ್ಟ್ರಪತಿ ಮಮ್ನೂನ್ ಹುಸೇನ್ ಪಣ ತೊಟ್ಟಿದ್ದಾರೆ.
ಎರಡನೇ ವಿಶ್ವ ಯುದ್ಧನ ಕೊನೆಯಾದ ೭೦ನೆ ವಾರ್ಷಿಕೋತ್ಸವದ ಆಚರಣೆಗಾಗಿ ಚೈನಾಕ್ಕೆ ಬಂದಿರುವ ಹುಸೇನ್ ಅವರಿಗೆ ಎರಡು ದೇಶಗಳ ನಡುವೆ ಒಳ್ಳೆಯ ಬಾಂಧವ್ಯ ಅಗತ್ಯ ಎಂದು ಕ್ಸಿ ತಿಳಿಸಿದ್ದಾರೆ.
ಕಳೆದ ಏಪ್ರಿಲ್ ನಲ್ಲಿ ಕ್ಸಿ ಪಾಕಿಸ್ತಾನ ಭೇಟಿ ನೀಡಿದ್ದಾಗ ಬಂದರು ಅಭಿವೃದ್ಧಿ, ಸಾರಿಗೆ ಮೂಲಸೌಕರ್ಯ ಅಭಿವೃದ್ಧಿ, ಇಂಧನ ಮತ್ತು ಕೈಗಾರಿಕೋದ್ಯಮದಲ್ಲಿ ಎರಡು ದೇಶಗಳು ಸಹಕಾರಕ್ಕೆ ಒಪ್ಪಂದ ಮಾಡಿಕೊಂಡಿದ್ದವು.
ಕೈಗಾರಿಕಾ ಅಭಿವೃದ್ಧಿಯಲ್ಲಿ ಪಾಕಿಸ್ತಾನದ ಜೊತೆ ಚೈನಾ ಒಳ್ಳೆಯ ಬಾಂಧವ್ಯ ಹೊಂದಲಿದೆ ಎಂದು ಕ್ಸಿ ಹೇಳಿದ್ದಾರೆ.
"ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಪಾಕಿಸ್ತಾನಕ್ಕೆ ಚೈನಾ ಅಗತ್ಯ ಬೆಂಬಲ ನೀಡಲಿದೆ. ಅಂತರಾಷ್ಟ್ರೀಯ ಮತ್ತು ಪ್ರಾದೇಶಿಕ ತೊಂದರೆಗಳಿಗೆ ಪಾಕಿಸ್ತಾನದ ಜೊತೆ ಚೈನಾ ಕೈಜೋಡಿಸಲಿದೆ" ಎಂದು ಅವರು ತಿಳಿಸಿದ್ದಾರೆ.