ವಿದೇಶ

ಶ್ರೀಮಂತ ದೇಶಗಳಿಗೆ ಜಾಗತಿಕ ಪರಿಸರವನ್ನು ರಕ್ಷಿಸುವ ಹೊಣೆ ಇದೆ: ಸುಮಿತ್ರಾ ಮಹಾಜನ್

Sumana Upadhyaya

ವಿಶ್ವಸಂಸ್ಥೆ: ಜಾಗತಿಕ ಪರಿಸರವನ್ನು ರಕ್ಷಿಸುವ ಜವಾಬ್ದಾರಿಯನ್ನು ಅಭಿವೃದ್ಧಿಶೀಲ ದೇಶಗಳು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್, ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಶ್ರೀಮಂತರು ತಮ್ಮ ಸಬ್ಸಿಡಿ ಸಿಲಿಂಡರನ್ನು ಬಿಟ್ಟು ಬಡವರಿಗೆ ನೀಡುವಂತೆ ಕರೆ ನೀಡಿರುವುದನ್ನು ಉದಾಹರಣೆ ಕೊಟ್ಟರು.

 ವಿಶ್ವಸಂಸ್ಥೆಯಲ್ಲಿ ನಡೆಯುತ್ತಿರುವ ಸಂಸತ್ತು ಅಧ್ಯಕ್ಷರ 4ನೇ ವಿಶ್ವ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಾಗತಿಕ ಸಂರಕ್ಷಣೆಗೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಮಾತ್ರ ಪ್ರಯತ್ನಿಸಿದರೆ ಸಾಲದು ಎಂದು ಹೇಳಿದರು.

ಜಾಗತಿಕ ಸಂರಕ್ಷಣೆಗೆ ಅಭಿವೃದ್ಧಿಶೀಲ ದೇಶಗಳೂ ಕೂಡ ಒಟ್ಟಾಗಿ ಮುಂದೆ ಬಂದು ಶ್ರಮಿಸಬೇಕು. ಹವಾಮಾನ ವೈಪ್ಯರೀತ್ಯದಿಂದ ಉಂಟಾಗುತ್ತಿರುವ ತೊಂದರೆಯನ್ನು ಆರ್ಥಿಕ ಮತ್ತು ತಾಂತ್ರಿಕ ಸಂಪನ್ಮೂಲಗಳಿಂದ ಬಗೆಹರಿಸಬೇಕು ಎಂದು ಹೇಳಿದರು.

ನವೆಂಬರ್ ನಲ್ಲಿ ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಸಮ್ಮೇಳನ ನಡೆಯಲಿದ್ದು, ಅಭಿವೃದ್ದಿ ಹೊಂದುತ್ತಿರುವ ದೇಶಗಳಿಗೆ ಜಾಗತಿಕ ಬಿಸಿ ಏರಿಕೆಯನ್ನು ತಡೆಗಟ್ಟಲು ಕಾರ್ಬನ್ ಹೊಗೆ ಬಿಡುವುದನ್ನು ನಿಯಂತ್ರಣ ಮಾಡಬೇಕೆಂಬ ಒತ್ತಡವಿರುತ್ತದೆ.

SCROLL FOR NEXT