ಸಿಂಗಾಪುರ: ಸಿಂಗಾಪುರದಲ್ಲಿ ಸೆ.11ರಂದು ನಡೆಯಲಿರುವ ಮಹಾ ಚುನಾವಣೆಯಲ್ಲಿ ಭಾರತೀಯ ಮೂಲದ 21 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
ಕಾನೂನು, ವಿದೇಶಾಂಗ ಸಚಿವರಾದ ಕೆ.ಷಣ್ಮುಗಂ, ಎಸ್. ಈಶ್ವರನ್, ವಿವಿಯನ್ ಬಾಲ ಕೃಷ್ಣನ್ ಇವರಲ್ಲಿ ಪ್ರಮುಖರು. ಇವರೆಲ್ಲ ಆಡಳಿ ತಾರೂಢ ಪೀಪಲ್ಸ್ ಆ್ಯಕ್ಷನ್ ಪಾರ್ಟಿ (ಪಿಎಪಿ)ಗೆ ಸೇರಿದವರು.
ಸಿಂಗಾಪುರವನ್ನು 50ಕ್ಕೂ ಹೆಚ್ಚು ವರ್ಷಗಳಿದಂ ಆಳುತ್ತಾ ಬಂದಿರುವ ಪಿಎಂಪಿ ಈ ಬಾರಿಯೂ ಗೆಲವಿನ ನಿರೀಕ್ಷೆಯಲ್ಲಿದೆ. ಹೆಚ್ಚುತ್ತಿರುವ ವಿದೇಶಿಗರು, ಜೀವನ ನಿರ್ವಹಣೆ ವೆಚ್ಚದಲ್ಲಿ ಆಗುತ್ತಿರುವ ಏರಿಕೆ ಈ ಬಾರಿಯ ಚುನಾವಣೆಯ ಪ್ರಮುಖ ವಿಚಾರ ಆಗುವ ಸಾಧ್ಯತೆ ಇದೆ.
ಈಗಾಗಲೇ ಪ್ರತಿಪಕ್ಷಗಳು ಈ ವಿಚಾರಕ್ಕಾಗಿ ಆಡಳಿತಾ ರೂಢ¸ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ.