ಸಾಂದರ್ಭಿಕ ಚಿತ್ರ 
ವಿದೇಶ

ಕ್ರೈಸ್ತರು ಇಲ್ಲಿ ಬದುಕಬೇಕಾದರೆ ಇಸ್ಲಾಮಿಕ್ ರಾಷ್ಟ್ರದ ಈ ನಿಯಮ ಪಾಲಿಸಲೇಬೇಕು!

ಕ್ರೈಸ್ತ ಸಮುದಾಯದ ಸಾವಿರಾರು ಜನರನ್ನು ಹತ್ಯೆಗೈದ ನಂತರ ಇದೀಗ ಇಸ್ಲಾಮಿಕ್ ಸ್ಟೇಟ್, ಅವರ ರಾಷ್ಟ್ರಗಳಲ್ಲಿ ಕ್ರೈಸ್ತರು ಬದುಕಬೇಕೆಂದಿದ್ದರೆ ಧಿಮ್ಮಾ ...

ಇಸ್ತಾನ್‌ಬುಲ್: ಕ್ರೈಸ್ತ ಸಮುದಾಯದ ಸಾವಿರಾರು ಜನರನ್ನು ಹತ್ಯೆಗೈದ ನಂತರ ಇದೀಗ ಇಸ್ಲಾಮಿಕ್ ಸ್ಟೇಟ್, ಅವರ ರಾಷ್ಟ್ರಗಳಲ್ಲಿ ಕ್ರೈಸ್ತರು ಬದುಕಬೇಕೆಂದಿದ್ದರೆ ಧಿಮ್ಮಾ ನಿಯಮಗಳನ್ನು ಪಾಲಿಸಬೇಕೆಂದು ಹೇಳಿದೆ. ಧಿಮ್ಮಾ ಒಪ್ಪಂದದಲ್ಲಿ 11 ನಿಯಮಗಳಿವೆ. ಈ ನಿಯಮಗಳನ್ನು ಪಾಲಿಸುವುದರ ಜತೆಗೆ ಜಿಜ್‌ಯಾ  ತೆರಿಗೆಯನ್ನು ಕೂಡಾ ಪಾವತಿಸಬೇಕಿದೆ.

ಇಸ್ಲಾಮಿಕ್ ಸ್ಟೇಟ್‌ನಲ್ಲಿರುವ ಇತರ ಸಮುದಾಯ ಅಥವಾ ಧರ್ಮಕ್ಕೆ ಸೇರಿದ ಜನರನ್ನು ಸೂಚಿಸುವ ಪದವಾಗಿದೆ ಧಿಮ್ಮಾ. ಧಿಮ್ಮಾ ಎಂದರೆ ರಕ್ಷಿತರು ಎಂಬ ಅರ್ಥವಿದೆ. ಅಂದರೆ ಧಿಮ್ಮಾ ನಿಯಮಗಳನ್ನು ಪಾಲಿಸಿ ಜಿಜ್‌ಯಾ ತೆರಿಗೆಯನ್ನು ಪಾವತಿಸುವುದಾದರೆ ಇಸ್ಲಾಮಿಕ್ ರಾಷ್ಟ್ರದಲ್ಲಿ ಅವನಿಗೆ ರಕ್ಷಣೆ ಒದಗಿಸಲಾಗುತ್ತದೆ.

ಮಧ್ಯಪ್ರಾಚ್ಯ ರಿಸರ್ಚ್ ಇನ್ಸಿಟ್ಯೂಟ್ ಪ್ರಕಾರ ಅಲ್ ಕರ್ಯಾತೇನ್ ನಗರದಲ್ಲಿನ ಹಲವಾರು ಕ್ರೈಸ್ತರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದಿದೆ.

ಧಿಮ್ಮಾ ಒಪ್ಪಂದದಲ್ಲಿರುವ ನಿಯಮಗಳು ಹೀಗಿವೆ


1. ಇಸ್ಲಾಂ ಜನರು  ವಾಸಿಸುತ್ತಿರುವ ಪ್ರದೇಶಗಳಲ್ಲಿ ಕ್ರೈಸ್ತರು ಅವರ ಪ್ರಾರ್ಥನಾಲಯ ಅಥವಾ ಸ್ಮಾರಕಗಳನ್ನು  ಕಟ್ಟುವಂತಿಲ್ಲ.

2. ಮುಸ್ಲಿಮರೇ ಇರುವ ರಸ್ತೆ ಅಥವಾ ಮಾರುಕಟ್ಟೆಗಳಲ್ಲಿ ಕ್ರೈಸ್ತರು ಶಿಲುಬೆ ಅಥವಾ ಧರ್ಮಗ್ರಂಥಗಳು ಕಾಣಿಸಿಕೊಳ್ಳಬಾರದು. ಪ್ರಾರ್ಥನೆಯ ಹೊತ್ತಲ್ಲಿ ಧ್ವನಿ ವರ್ಧಕಗಳನ್ನು ಬಳಸುವಂತಿಲ್ಲ

3. ಕ್ರೈಸ್ತರ ಪ್ರಾರ್ಥನೆಯಾಗಲಿ, ಚರ್ಚ್ ಗಂಟೆಗಳ ಸದ್ದಾಗಲೀ ಮುಸ್ಲಿಮರ ಕಿವಿಗೆ ಬೀಳಬಾರದು.ಚರ್ಚ್‌ನ ಒಳಗೆ ಮಾತ್ರ ಗಂಟೆ ಬಾರಿಸಬೇಕು.

4. ಇಸಿಸ್ ವಿರುದ್ಧ ಮಾತಾಡುವಂತಿಲ್ಲ. ಮುಸ್ಲಿಮರ ವಿರುದ್ಧ ಏನೂ ಮಾತಾಡಬಾರದು. ಮುಸ್ಲಿಮೇತರ ಮೇಲೆ ನಿಗಾ ಇಡಲಾಗುವುದು.

5.ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆ ಮಾಡುವಂತಿಲ್ಲ

6. ಮುಸ್ಲಿಮರನ್ನು ಗೌರವಿಸಬೇಕು ಮತ್ತು ಇಸ್ಲಾಂ ಧರ್ಮವನ್ನು ವಿಮರ್ಶಿಸಬಾರುದು.
7. ಶ್ರೀಮಂತ ಕ್ರೈಸ್ತರು ವರ್ಷಕ್ಕೆ 4 ಚಿನ್ನದ ದಿನಾರ್‌ಗಳನ್ನು, ಮಧ್ಯಮ ವರ್ಗದ ಜನರು 2 ಚಿನ್ನದ ದಿನಾರ್‌ಗಳನ್ನು ಮತ್ತು ಬಡವರು ಒಂದು ಚಿನ್ನದ ದಿನಾರ್‌ನ್ನು ವರ್ಷಕ್ಕೊಮ್ಮೆ ಜಿಜ್‌ಯಾ ತೆರಿಗೆ ರೂಪದಲ್ಲಿ ಪಾವತಿಸಬೇಕು.  ಕ್ರೈಸ್ತರು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸತಕ್ಕದ್ದು ಮತ್ತು ಜಿಜ್‌ಯಾ ತೆರಿಗೆಯನ್ನು ವರ್ಷದಲ್ಲಿ ಎರಡು ಕಂತುಗಳಾಗಿ ಪಾವತಿಸಬೇಕು.

8. ಸ್ವಂತವಾಗಿ ಗನ್ ಗಳನ್ನು ಇರಿಸಿಕೊಳ್ಳುವಂತಿಲ್ಲ

9.ಮುಸ್ಲಿಮ್ ಜನರೊಡನೆ ಬೆರೆಯುವಾಗ ಅಥವಾ ಮುಸ್ಲಿಂ ಮಾರುಕಟ್ಟೆಗಳಲ್ಲಿ ಹಂದಿ ಮತ್ತು ಮದ್ಯ ವರ್ಜ್ಯ. ಸಾರ್ವಜನಿಕವಾಗಿ ಮದ್ಯ ಸೇವಿಸುವಂತಿಲ್ಲ.

10.ಅವರವರ ರುದ್ರಭೂಮಿಯನ್ನು ಅವರವರೇ ನೋಡಿಕೊಳ್ಳಬೇಕು

11. ಇಸಿಸ್ ವಸ್ತ್ರಸಂಹಿತೆ ಮತ್ತು ವಾಣಿಜ್ಯ ನಿಬಂಧನೆಗಳನ್ನು ಪಾಲಿಸತಕ್ಕದ್ದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT