ವಿದೇಶ

ಭಾರತಕ್ಕೆ ಶ್ರೀಲಂಕಾ ಪ್ರಧಾನಿ ವಿಕ್ರಮಸಿಂಘೆ ಪ್ರಥಮ ವಿದೇಶ ಪ್ರವಾಸ

Srinivas Rao BV

ಕೊಲಂಬೊ: ಇತ್ತೀಚೆಗಷ್ಟೆ  ಶ್ರೀಲಂಕಾದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ರನಿಲ್ ವಿಕ್ರಮಸಿಂಘೆ ಭಾರತಕ್ಕೆ ಪ್ರಥಮ ವಿದೇಶ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.

ಸೆ.14 ರಿಂದ 16 ವರೆಗೆ ವಿಕ್ರಮ ಸಿಂಘೆ ಅವರ ವಿದೇಶ ಪ್ರವಾಸ ನಿಗದಿಯಾಗಿದ್ದು ಈ ಅವಧಿಯಲ್ಲಿ ಭಾರತೀಯ ಮೀನುಗಾರರ ಸಮಸ್ಯೆ, ಆರ್ಥಿಕ ಒಪ್ಪಂದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನೂ ರನಿಲ್ ವಿಕ್ರಮ ಸಿಂಘೆ ಸಭೆ ನಡೆಸಲಿದ್ದಾರೆ. ಶ್ರೀಲಂಕಾ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಮೈತ್ರಿಪಾಲ ಸಿರಿಸೇನ ಸಹ ಪ್ರಥಮ ವಿದೇಶ ಪ್ರವಾಸಕ್ಕೆ ಭಾರತವನ್ನು ಆಯ್ಕೆ ಮಾಡಿಕೊಂಡಿದ್ದರು. ಈಗ ಶ್ರೀಲಂಕಾ ಪ್ರಧಾನಿಯೂ ಅದೇ ಮಾರ್ಗ ಅನುಸರಿಸುತ್ತಿರುವುದು ಮಹತ್ವ ಪಡೆದುಕೊಂಡಿದೆ.  ಕಳೆದ ತಿಂಗಳು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯುನೈಟೆಡ್ ನ್ಯಾಷನಲ್ ಪಾರ್ಟಿ ಪಕ್ಷ ಬಹುಮತ ಪಡೆದು ವಿಕ್ರಮ ಸಿಂಘೆ ಪ್ರಧಾನಿಯಾಗಿ ಆಯ್ಕೆಗೊಂಡಿದ್ದರು.

SCROLL FOR NEXT