ವಿದೇಶ

ಜುಂಪಾ ಲಹಿರಿಗೆ ಮಾನವತಾ ಮೆಡಲ್

Srinivasamurthy VN

ವಾಷಿಂಗ್ಟನ್: ಭಾರತೀಯ- ಅಮೆರಿಕನ್ ಕಾದಂಬರಿಗಾರ್ತಿ ಜುಂಪಾ ಲಹಿರಿ ಅವರಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಶುಕ್ರವಾರ ಪ್ರತಿಷ್ಠಿತ ನ್ಯಾಷನಲ್ ಹ್ಯುಮ್ಯಾನಿಟಿ ಮೆಡಲ್ (2014ರ ರಾಷ್ಟ್ರೀಯ ಮಾನವತಾ ಪ್ರಶಸ್ತಿ) ಪ್ರದಾನ ಮಾಡಿದರು.

ವಿಮುಖತೆ ಮತ್ತು ಒಡಮೆಯ ಕಥೆಯನ್ನು ಅದ್ಭುತವಾಗಿ ರಚಿಸುವ ಮೂಲಕ ಭಾರತೀಯ-ಅಮೆರಿಕ ನ್ ಅನುಭವವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಕ್ಕಾಗಿ ಪುಲಿಟ್ಜರ್ ಪ್ರಶಸ್ತಿ ವಿಜೇತೆ ಲಹಿರಿ  ಅವರಿಗೆ ಈ ಗೌರವ ಸಂದಿದೆ. ಶ್ವೇತಭವನದ ಈಸ್ಟ್ ರೂಂನಲ್ಲಿ ನಡೆದ ಸಮಾರಂಭದಲ್ಲಿ ಇತರೆ 20 ಮಂದಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಿಶೆಲ್ ಒಬಾಮ ಹಾಗೂ ಕಲೆ-ಮಾನವತೆ  ಕ್ಷೇತ್ರದನ ಹಲವು ಗಣ್ಯರು ಪಾಲ್ಗೊಂಡಿದ್ದರು. ಇಲ್ಲಿ ಮಾತನಾಡಿದ ಒಬಾಮ, ``ಇಂದು ಪ್ರಶಸ್ತಿ ಗಳನ್ನು ಮುಡಿಗೇರಿಸಿಕೊಂಡ ಗಣ್ಯರು ಅಪರೂಪದ ಸತ್ಯಗಳನ್ನು ಹೇಳಿಕೊಂಡವರು. ಇವರಿಲ್ಲದಿದ್ದರೆ ಎಡಿಬಲ್ ಸ್ಕೂಲ್ ಯಾರ್ಡ್ ಇರುತ್ತಿರಲಿಲ್ಲ, ಜುಂಪಾ ಲಹಿರಿಯ ಕಾದಂಬರಿಗಳು ಇರುತ್ತಿರಲಿಲ್ಲ, ಕ್ಯಾರಿ, ಮಿಸರಿಯಂತಹ ಭಯಾನಕ ಕಥಾನಕಗಳು ಇರುತ್ತಿರಲಿಲ್ಲ'' ಎಂದರು.

SCROLL FOR NEXT