ಸಿರಿಯಾ ಹಾಗೂ ಇರಾಕ್‍ನಲ್ಲಿ ರಕ್ತದೋಕುಳಿ ಹರಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಮಾನವ ಕಳ್ಳಸಾಗಣೆ ಹಾಗೂ ತೆರಿಗೆಯಿಂದ ಭಾರಿ ಮೊತ್ತದ ಹಣ ಸಂಪಾದಿಸುತ್ತಿದ್ದಾರೆ. ಐಎಸ್ ಉಗ್ರರು ದೇಶವೊಂದನ್ನು ಕಟ್ಟಲು ಹೊರಟಿದ್ದಾರೆ, ಅದಕ್ಕಾಗಿ ಕೋಟ್ಯಂತರ ರು. ಅಗತ್ಯವಿದೆ. ಈ ಹಿಂದೆ ಅವರು ತೈಲದ ಮೂಲಕ ಈ ಆದಾಯ ಸಂಗ್ರಹಿಸುತ್ತಿದ್ದರು. ಆದರೆ ಈಗ ತೈಲ ದರ ಕುಸಿದಿರುವು ದರಿಂದ ಅವರ
ಆದಾಯವೂ ಕುಸಿದಿದೆ.
ಹಾಗಾಗಿ ಯುರೋಪ್ ಮತ್ತಿತರ ದೇಶಗಳಿಗೆ ಮಾನವ ಕಳ್ಳಸಾಗಣೆ ಮೂಲಕ ಭಾರಿ ಹಣ ಸಂಪಾದಿಸುತ್ತಿದ್ದು, ವರ್ಷಕ್ಕೆ ಕನಿಷ್ಠ ನೂರು ಶತಕೋಟಿ ರೂಪಾಯಿ ಸಂಗ್ರಹವಾಗಲಿದೆ ಎನ್ನಲಾಗಿದೆ.