ಬ್ರೆಸಿಲಿಯಾ: ಇಲ್ಲಿ ಲಾಟರಿ ಅಥವಾ ಇನ್ಯಾವುದೇ ಜೂಜಾಟದಲ್ಲಿ ಗೆದ್ದವರಿಗೆ ಬಹುಮಾನ ಹಣದ ಜತೆಗೆ ಕನ್ಯೆಯೊಬ್ಬಳನ್ನು ಗಿಫ್ಟ್ ಕೊಡಲಾಗುತ್ತದೆ. ಹೌದು, ಬ್ರೆಜಿಲ್‌ನ ಇನ್‌ಕುಜಿಲ್‌ಹದಾ ಎಂಬಲ್ಲಿ ಗಂಡಸರು ಲಾಟರಿ ಗೆದ್ದರೆ ಅವರಿಗೆ ಹದಿಹರೆಯದ ಕನ್ಯೆಯೊಬ್ಬಳನ್ನು ಬಹುಮಾನವಾಗಿ ನೀಡಲಾಗುತ್ತದೆ. ಲಾಟರಿ ಗೆದ್ದವನ ಲೈಂಗಿಕ ತೃಷೆ ನೀಗಿಸಲು ಕನ್ಯೆಯಾಗಿರುವ ಹೆಣ್ಣು ಮಕ್ಕಳನ್ನು ಬಹುಮಾನ ನೀಡುವ ಇಲ್ಲಿನ ಸಂಪ್ರದಾಯದ ಬಗ್ಗೆ ಮೇಲ್ ಆನ್‌ಲೈನ್ ಪತ್ರಿಕೆ ಸುದ್ದಿ ಪ್ರಕಟಿಸಿದೆ.
ರು.500ರ ಲಾಟರಿ ಟಿಕೆಟ್ ಖರೀದಿಸಿ ಅದರಲ್ಲಿ ಗೆದ್ದವನಿಗೆ ಕನ್ಯೆಯನ್ನು ನೀಡಲಾಗುತ್ತದೆ. ವಿಶ್ವದಲ್ಲಿ ಅತೀ ಹೆಚ್ಚು ಮಕ್ಕಳ ವೇಶ್ಯಾವಾಟಿಕೆ ನಡೆಯುವ ದೇಶಗಳ ಪಟ್ಟಿಯಲ್ಲಿ ಬ್ರೆಜಿಲ್ ಎರಡನೇ ಸ್ಥಾನ ಹೊಂದಿದೆ.
ಬ್ರೆಸಿಲಿಯಾದ ಹಿಂದುಳಿದ ಪ್ರದೇಶವಾದ ಇನ್‌ಕುಜಿಲ್‌ಹದಾದಲ್ಲಿ ಹೆಣ್ಮಕ್ಕಳು ವೇಶ್ಯಾವಾಟಿಕೆಗೆ ಬೇಗನೆ ಬಲಿಯಾಗುತ್ತಾರೆ. ಹೆಣ್ಮಕ್ಕಳನ್ನು ಪುಸಲಾಯಿಸಿ ಇಂಥಾ ದಂಧೆಗಳಿಗೆ ಬಳಸಲಾಗುತ್ತದೆ ಎನ್ನುತ್ತಿವೆ ಸುದ್ದಿಮೂಲಗಳು.