ನ್ಯೂಯಾರ್ಕ್: ಏಡ್ಸ್ ಸಂಶೋಧನೆಯ ಮೂಲಕ ಲಕ್ಷಾಂತರ ಮಂದಿಯ ಜೀವ ಉಳಿಸಿದ ಅಮೆರಿಕದ ಇಮ್ಯುನಾಲಜಿಸ್ಟ್ ಡಾ. ವಿಲಿಯಂ ಇ.ಪಾಲ್(79) ಗುರುವಾರ ನಿಧನರಾಗಿದ್ದಾರೆ. ಲ್ಯುಕೇಮಿಯಾದಿಂದ ಬಳಲುತ್ತಿದ್ದ ಅವರು ಮ್ಯಾನ್ ಹ್ಯಾಟನ್‍ನ ಆಸ್ಪತ್ರೆಯಲ್ಲಿ ಕೊನೆಯು ಸಿರೆಳೆದಿದ್ದಾರೆ.
1993ರಲ್ಲಿ ಆರಂಭವಾದ ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳ ಹೊಸ ಏಡ್ಸ್ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ಡಾ. ಪೌಲ್ ಸೇವೆ ಸಲ್ಲಿಸಿದ್ದರು. ಆ ಸಮಯದಲ್ಲಾಗಲೇ ಎಚ್‍ಐವಿ ಸೋಂಕಿನ ಬಗ್ಗೆ ಸರ್ಕಾರದ ಅಸಂಘಟಿತ ಪ್ರತಿಕ್ರಿಯೆಗೆ ಜನಮಾನಸದಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪಾಲ್‍ರ ಸಂಶೋಧನೆಯ ಫಲವಾಗಿ ಆ್ಯಂಟಿರೆಟ್ರೋವೈರಲ್ ಥೆರಪಿ ಅಸ್ತಿತ್ವಕ್ಕೆ ಬಂತು.