ಪ್ರಧಾನಿ ನರೇಂದ್ರ ಮೋದಿ 
ವಿದೇಶ

ಫೇಸ್‍ಬುಕ್‍ನಲ್ಲಿ ಮೋದಿ ಮಾತುಗಳು

ಫೇಸ್ ಬುಕ್ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡ ಮನದಾಳದ...

ಫೇಸ್ ಬುಕ್ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡ ಮನದಾಳದ ಮಾತುಗಳು...

  • ನಮ್ಮದು ಈಗ 8 ಲಕ್ಷಕೋಟಿ ಡಾಲರ್‍ನ ಆರ್ಥಿಕತೆ. ಅದನ್ನು 20 ಲಕ್ಷಕೋಟಿ ಡಾಲರ್‍ಗೇರಿಸಬೇಕು ಎಂಬುದು ನನ್ನ ಆಸೆ
  •  ಮೊದಲು ನಾನು ಇಂಟರ್ನೆಟ್‍ಗೆ ಲಾಗ್‍ಇನ್ ಆದಾಗ, ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಕೂಡ ಭಾವಿಸಿರಲಿಲ್ಲ
  • ಸಾಮಾಜಿಕ ಮಾಧ್ಯಮವು ನನ್ನ ಆಲೋಚನಾ ಪ್ರಕ್ರಿಯೆಯಲ್ಲೇ ದೊಡ್ಡ ಬದಲಾವಣೆ ತಂದಿತು. ನನಗೇನು ಮಾಹಿತಿ ಬೇಕೋ ಅದನ್ನು ಕ್ಷಣಮಾತ್ರದಲ್ಲಿ ನೀಡುವ ಸಾಮರ್ಥ್ಯ ಸಾಮಾಜಿಕ ಮಾಧ್ಯಮಕ್ಕಿದೆ
  •  ನನ್ನ ಶಿಕ್ಷಣದ ಕೊರತೆಯನ್ನು ನಾನು ಸಾಮಾಜಿಕ ತಾಣಗಳ ಮೂಲಕ ನೀಗಿಸಿದ್ದೇನೆ. ರಾಜಕಾರಣಿಗಳು ಈ ತಾಣಗಳಿಂದ ದೂರ ಓಡಬಾರದು. ಬದಲಿಗೆ, ನಿರಂತರ ಸಂಪರ್ಕ ಹೊಂದಿರಬೇಕು
  •  ಸ್ಕೂಟರನ್ನು ಸ್ಟಾರ್ಟ್ ಮಾಡಲು ಒಂದು ಸೆಕೆಂಡು ಸಾಕು. ಆದರೆ, 40 ಬೋಗಿಗಳುಳ್ಳ ರೈಲನ್ನು ಚಲಿಸುವಂತೆ ಮಾಡಲು ಸಮಯ ಬೇಕಾಗುತ್ತದೆ
  • 40 ವರ್ಷಗಳ ಹಿಂದೆ ಬಡವರಿಗೆ ನೆರವಾಗಲೆಂದೇ ಬ್ಯಾಂಕುಗಳನ್ನು ರಾಷ್ಟ್ರೀಕೃತಗೊಳಿಸಲಾಯಿತು. ಆದರೆ, ಈಗಲೂ ಶೇ.60ರಷ್ಟು ಮಂದಿಗೆ ಬ್ಯಾಂಕ್ ಖಾತೆಯೇ ಇರಲಿಲ್ಲ. ನಾವು 100 ದಿನಗಳಲ್ಲಿ 18 ಕೋಟಿ ಖಾತೆಗಳನ್ನು ತೆರೆದೆವು. ಇದುವೇ ಬದಲಾವಣೆಯ ವೇಗ.
  • ಉದ್ದಿಮೆ ಮಾಡಲು ಸುಲಭವಾದ ದೇಶಗಳ ಪೈಕಿ ಭಾರತ 140ನೇ ಸ್ಥಾನದಲ್ಲಿದೆ. ಮುಂದಿನ ರೇಟಿಂಗ್ ವೇಳೆ ಭಾರತ ಸುಧಾರಿಸಲಿದೆ
  • ಅನೇಕ ರಾಷ್ಟ್ರಗಳು ಎಫ್ಡಿಐನಲ್ಲಿ ಹಿಂದೆ ಬಿದ್ದಿದ್ದರೂ ಭಾರತದಲ್ಲಿ ಎಫ್ ಡಿಐ ಪ್ರಗತಿ ಶೇ.40ರಷ್ಟಿದೆ. ಇದು ಮೇಕ್ ಇನ್ ಇಂಡಿಯಾ ಯಶಸ್ಸಿಗೆ ಸಾಕ್ಷಿ
  • ಭಾರತದಲ್ಲಿ 3ಡಿ ಇದೆ. ಅದುವೇ ನಮ್ಮ ವಿಶಿಷ್ಟ ಶಕ್ತಿ- ಡೆಮಾಗ್ರಫಿ, ಡೆಮಾಕ್ರಸಿ ಮತ್ತು ಡಿಮಾಂಡ್. ನಾನಿದಕ್ಕೆ 4ನೇ `ಡಿ'ಯನ್ನು ಸೇರಿಸಿದ್ದೇನೆ. ಅದು `ಡಿ-ರೆಗ್ಯುಲೇಷನ್'(ಸರ್ಕಾರದ ನಿಯಂತ್ರಣಮುಕ್ತ)
  • ಪ್ರತಿ ಸಮಾಜದಲ್ಲೂ ದೇವರೆಂದರೆ ಪುರುಷ. ಆದರೆ ಭಾರತದಲ್ಲಿ ಮಾತ್ರ ಹೆಣ್ಣಿಗೆ ದೇವರ ಸ್ಥಾನ ನೀಡಲಾಗಿದೆ. ದುರ್ಗಾ, ಕಾಳಿ, ಅಂಬಾ... ನಮ್ಮ ಮೂಲಭೂತ ಮೌಲ್ಯಗಳೇ ಮಹಿಳೆಯರಿಗೆ ಪ್ರಮುಖ ಪಾತ್ರ ನೀಡಿವೆ
  • ಸಬಲೀಕರಣವು ಪ್ರತಿ ಕುಟುಂಬದಲ್ಲೂ ನಡೆಯಬೇಕು. ಎಲ್ಲರೂ ತಮ್ಮ ಶಾಲೆಯ ದಾಖಲೆಗಳಲ್ಲಿ ಅಪ್ಪನ ಹೆಸರನ್ನು ಮಾತ್ರ ಹಾಕುತ್ತಿದ್ದರು. ನಾನು ಗುಜರಾತ್ ಸಿಎಂ ಆಗಿದ್ದಾಗ, ಅಮ್ಮನ ಹೆಸರೂ ಹಾಕುವಂತೆ ಸೂಚಿಸಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!