ಫ್ರಾನ್ಸ್ ಬಿಡುಗಡೆ ಮಾಡಿದ ವೈಮಾನಿಕ ದಾಳಿ ನಡೆಸಿದ ಯುದ್ಧ ವಿಮಾನಗಳ ಚಿತ್ರ 
ವಿದೇಶ

ಮೊದಲ ಫ್ರೆಂಚ್ ದಾಳಿ; ಸಿರಿಯಾದಲ್ಲಿ ೩೦ ಇಸ್ಲಾಮಿಕ್ ಸ್ಟೇಟ್ ಜಿಹಾದಿಗಳ ಹತ್ಯೆ

ಫ್ರಾನ್ಸ್ ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ಮೇಲೆ ನಡೆಸಿದ ಮೊದಲ ದಾಳಿಯಲ್ಲಿ ೧೨ ಜಿಹಾದಿ ಮಕ್ಕಳೂ ಒಳಗೊಂದಂತೆ ಒಟ್ಟು ೩೦ ಜಿಹಾದಿಗಳನ್ನು ಹತ್ಯೆ

ಬೀರತ್: ಫ್ರಾನ್ಸ್ ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ಮೇಲೆ ನಡೆಸಿದ ಮೊದಲ ದಾಳಿಯಲ್ಲಿ ೧೨ ಜಿಹಾದಿ ಮಕ್ಕಳೂ ಒಳಗೊಂದಂತೆ ಒಟ್ಟು ೩೦ ಜಿಹಾದಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಇಂದು ವರದಿಯಾಗಿದೆ.

"ಪೂರ್ವ ಸಿರಿಯಾದ ಇಸ್ಲಾಮಿಕ್ ಸ್ಟೇಟ್ ತರಬೇತಿ ಶಿಬರದ ಮೇಲೆ ನಡೆಸಿದ ಫ್ರೆಂಚ್ ವೈಮಾನಿಕ ದಾಳಿಯಲ್ಲಿ (ಭಾನುವಾರ) ೩೦ ಐಎಸ್ ಉಗ್ರರು ಹತ್ಯೆಯಾಗಿದ್ದಾರೆ. ಇವರಲ್ಲಿ 'ಕಬ್ಸ್ ಆಫ್ ಕ್ಯಾಲಿಫತ್' ಎಂದು ಕರೆಯಲಾಗುವ ೧೨ ಜಿಹಾದಿ ಮಕ್ಕಳು ಕೂಡ ಸೇರಿದ್ದಾರೆ" ಎಂದು ಸಿರಿಯಾದ ಮಾನವ ಹಕ್ಕುಗಳ ಪರಿವೀಕ್ಷಕ ಅಬ್ದೆಲ್ ರಹಮಾನ್ ತಿಳಿಸಿದ್ದಾರೆ.

ಹತ್ಯೆಯಾದವರಲ್ಲಿ ವಿದೇಶಿ ಐಎಸ್ ಹೋರಾಟಗಾರರು ಸೇರಿದ್ದಾರೆ ಮತ್ತು ಈ ದಾಳಿಯಲ್ಲಿ ಸುಮಾರು ೨೦ ಜನ ಗಾಯಗೊಂಡಿದ್ದಾರೆ ಎಂದು ರಹಮಾನ್ ತಿಳಿಸಿದ್ದಾರೆ.

ಆರು ಫ್ರೆಂಚ್ ಯುದ್ಧ ವಿಮಾನಗಳು ಡೇರ್ ಎಜ್ಜಾರ್ ನಗರದ ಐಎಸ್ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿದವು ಎಂದು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹಾಲ್ಲೆಂಡೆ ಭಾನುವಾರ ತಿಳಿಸಿದ್ದರು. ಮುಂದಿನ ವಾರಗಳಲ್ಲಿ ಹೆಚ್ಚಿನ ದಾಳಿ ನಡೆಯುವ ಸೂಚನೆಯನ್ನು ಕೂಡ ನೀಡಿದ್ದಾರೆ.

ಇದು ಸಿರಿಯಾದಲ್ಲಿ ಫ್ರಾನ್ಸ್ ನಡೆಸಿದ ಮೊದಲ ದಾಳಿಯಾಗಿದ್ದರೂ, ಇರಾಕಿನಲ್ಲಿ ಐಎಸ್ ವಿರುದ್ಧ ನಡೆದಿರುವ ೪೫೦೦ ವೈಮಾನಿಕ ದಾಳಿಗಳಲ್ಲಿ ೨೧೫ ಫ್ರಾನ್ಸ್ ನವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!