ವಿದೇಶ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಪರ ಧ್ವನಿಯನ್ನು ಬಲವಂತವಾಗಿ ಹತ್ತಿಕ್ಕುತ್ತಿರುವ ಪಾಕ್

Vishwanath S
ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತ ಪರ ಧ್ವನಿ ದಿನೇ ದಿನೇ ಬಲಗೊಳ್ಳುತ್ತಿದ್ದು, ಪಾಕ್ ಸೇನೆ ಬಲವಂತವಾಗಿ ಜನರ ಧ್ವನಿಯನ್ನು ಹತ್ತಿಕ್ಕುತ್ತಿರುವ ಬಗ್ಗೆ ಪುರಾವೆಗಳು ಸಿಕ್ಕಿವೆ. 
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜನರು ಪಾಕ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳಿರುವ ಹೊಸ ವಿಡಿಯೋವೊಂದು ಸಿಎನ್ಎನ್ ಐಬಿಎನ್ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗಿದೆ. ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ಸರ್ಕಾರ, ಪಾಕಿಸ್ತಾನದ ಬಣ್ಣ ಇನ್ನಷ್ಟು ಬಯಲಾಗಿದೆ ಎಂದು ಹೇಳಿದೆ.
1947ರಿಂದಲೂ ಪಾಕಿಸ್ತಾನ ಭಾಗದಲ್ಲಿರುವ ಕಾಶ್ಮೀರದಲ್ಲಿ ಜನರ ಭಾವನೆಗಳನ್ನು ತುಳಿಯಲಾಗಿದೆ. ಅಲ್ಲಿಯ ಜನರು ತಮಗಿಷ್ಟವಿಲ್ಲದಿದ್ದರೂ ಪಾಕಿಸ್ತಾನದೊಂದಿಗೆ ಬದುಕುತ್ತಿದ್ದಾರೆ. ಅಲ್ಲಿಯ ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯವನ್ನೂ ಕೊಡದೇ ಅಮಾನವೀಯತೆ ತೋರಲಾಗುತ್ತಿದೆ" ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಜಿತೇಂದರ್ ಸಿಂಗ್ ಟೀಕಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಯುವಕರನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಭಯಾನಕ ಸತ್ಯವೂ ಹೊರಬಿದ್ದಿದೆ. ಭಯೋತ್ಪಾದನೆ ಕೃತ್ಯಗಳಿಗೆ ಅಲ್ಲಿಯ ಜನರನ್ನು ಸೆಳೆಯುವ ಪ್ರಯತ್ನ ಬಹಳ ತೀವ್ರವಾಗಿ ನಡೆಯುತ್ತಿದೆ. ಜಿಹಾದೀ ಹೋರಾಟಕ್ಕೆ ಕೈಜೋಡಿಸಲು ಒಪ್ಪದ ಯುವಕರನ್ನು ಐಎಸ್ಐ ವಶಕ್ಕೆ ನೀಡಲಾಗುತ್ತದೆ.
ಪಾಕ್ ಗಿಂತ ಭಾರತವೇ ವಾಸಿ!
ಅಲ್ಲಿಯ ಜನರು ಪಾಕಿಸ್ತಾನದಿಂದ ತಮಗೆ ಸ್ವಾತಂತ್ರ್ಯ ಬೇಕು ಎಂದು ಪ್ರಮುಖವಾಗಿ ಒತ್ತಾಯಿಸುತ್ತಿದ್ದಾರೆ. ಪಾಕಿಸ್ತಾನಕ್ಕಿಂತ ಭಾರತವೇ ವಾಸಿ ಎಂದು ಹೇಳುವ ಅಲ್ಲಿಯ ಜನರಿಗೆ ಭಾರತದ ಜೊತೆ ಸೇರಲು ಯಾವುದೇ ಆಕ್ಷೇಪವಿಲ್ಲವೆನ್ನಲಾಗಿದೆ.
SCROLL FOR NEXT