ವಿದೇಶ

ಚೀನಾ ಉತ್ಪಾದಿತ ವಸ್ತುಗಳು ಪರಿಸರಕ್ಕೆ ಮಾರಕ:ಅಧ್ಯಯನ

Shilpa D

ವಾಷಿಂಗ್ಟನ್: ಕಡಿಮೆ ಬೆಲೆಯಲ್ಲಿ ಸಿಗುವ ಚೀನಾ ಉತ್ಪಾದಿತ ವಸ್ತುಗಳು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತವೆ ಎಂದು ಸಂಶೋಧನೆಯೊಂದು ತಿಳಿಸಿದೆ.

ಅಮೆರಿಕದ ಇರ್ವಿನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸ್ಟೀವನ್ ಜೆ. ಡೇವಿಸ್ ಅವರು ಈ ಕುರಿತಂತೆ ಅಧ್ಯಯನ ನಡೆಸಿದ್ದಾರೆ. ಅಧ್ಯಯನದಲ್ಲಿ ಕಂಡುಬಂದಿರುವ ಮಾಹಿತಿಯಂತೆ ಬೇರೆ ದೇಶಗಳಲ್ಲಿ ಉತ್ಪಾದನೆಯಾಗುವ ವಸ್ತುಗಳಿಗಿಂತ ಚೀನಾದಲ್ಲಿ ತಯಾರಾಗುವ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಇಂಗಾಲವನ್ನು ಹೊರ ಸೂಸುತ್ತವೆ. ಇದು ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತದೆ ಎಂದು ಸಂಶೋಧನೆಯಿಂದ ದೃಢಪಟ್ಟಿದೆ.

ಅಭಿವೃದ್ದಿಶೀಲ ರಾಷ್ಟ್ರಗಳಿಗೆ ಅಪಾರ ಪ್ರಮಾಣದಲ್ಲಿ ಕಡಿಮೆ ದರದಲ್ಲಿ ವಸ್ತುಗಳನ್ನು ಪೂರೈಕೆ ಮಾಡುತ್ತಿರುವ ಚೀನಾ, ಕಳೆದ ಹದಿನೈದು ವರ್ಷಗಳಲ್ಲಿ ಸರಕು ವಸ್ತು ಉತ್ಪಾದನೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದೆ. ಇಂತಹ ಚೀನಾ ಸರಕುಗಳಿಂದ ಪರಿಸರಕ್ಕೆ ಸಿಕ್ಕಾಪಟ್ಟೆ ಹಾನಿಯಾಗುತ್ತಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

SCROLL FOR NEXT