ನೇಪಾಳ ಗಡಿಯಲ್ಲಿ ನಿಂತಿರುವ ಅಗತ್ಯ ವಸ್ತುಗಳ ಟ್ರಕ್ ಗಳು (ಸಂಗ್ರಹ ಚಿತ್ರ) 
ವಿದೇಶ

ತೀವ್ರಗೊಂಡ ನೇಪಾಳ ಇಂಧನ ಬಿಕ್ಕಟ್ಟು: ಸಂಧಾನಕ್ಕಾಗಿ ಭಾರತ ಸಲಹೆ

ಹೊಸ ಸಂವಿಧಾನಕ್ಕೆ ವಿರೋಧ ಮತ್ತು ಆಂತರಿಕ ಬಿಕ್ಕಟ್ಟಿನಿಂದಾಗಿ ನಲುಗುತ್ತಿರುವ ನೇಪಾಳದಲ್ಲಿ ಇಂಧನ ಬಿಕ್ಕಟ್ಟು ಮತ್ತಷ್ಟು ತಾರಕ್ಕೇರಿದ್ದು, ಇಂಧನ ಕೊರತೆಯಿಂದಾಗಿ ನೇಪಾಳ ಜನತೆ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ...

ಕಠ್ಮಂಡು: ಹೊಸ ಸಂವಿಧಾನಕ್ಕೆ ವಿರೋಧ ಮತ್ತು ಆಂತರಿಕ ಬಿಕ್ಕಟ್ಟಿನಿಂದಾಗಿ ನಲುಗುತ್ತಿರುವ ನೇಪಾಳದಲ್ಲಿ ಇಂಧನ ಬಿಕ್ಕಟ್ಟು ಮತ್ತಷ್ಟು ತಾರಕ್ಕೇರಿದ್ದು, ಇಂಧನ ಕೊರತೆಯಿಂದಾಗಿ ನೇಪಾಳ  ಜನತೆ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹಿಂಸಾರೂಪ ಪಡೆದುಕೊಂಡಿದೆ. ಹೀಗಾಗಿ ಇಂಡೋ-ನೇಪಾಳ ಗಡಿಯಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಟ್ರಕ್  ಗಳು ನೇಪಾಳ ಪ್ರವೇಶಿಸಲಾಗದೇ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿವೆ. ಕಳೆದ 5 ದಿನಗಳಿಂದ ಸುಮಾರು 10 ಕಿ.ಮೀ ಗೂ ಅಧಿಕ ದೂರದವರೆಗೂ ಟ್ರಕ್ ಗಳು ನಿಂತಿದ್ದು, ನೇಪಾಳದಲ್ಲಿ ಪ್ರತಿಭಟನೆ  ನಡೆಯುತ್ತಿರುವುದರಿಂದ ಟ್ರಕ್ ಗಳನ್ನು ನೇಪಾಳ ರಾಷ್ಟ್ರದೊಳಗೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನು ಭಾರತದಿಂದ ನೇಪಾಳಕ್ಕೆ ಹೊರಟಿದ್ದ ಅಗತ್ಯ ವಸ್ತುಗಳನ್ನು ತುಂಬಿಕೊಂಡಿರುವ  ಟ್ರಕ್ ಗಳ ಗಡಿಯಲ್ಲೇ ನಿಂತಿರುವುದರಿಂದ ನೇಪಾಳದಲ್ಲಿ ಅಗತ್ಯ ವಸ್ತುಗಳಿಗೆ ಹಾಹಾಕಾರ ಶುರುವಾಗಿದೆ.

ನೇಪಾಳದ ಪ್ರಸ್ತುತ ಬಿಕ್ಕಟ್ಟು ಕುರಿತಂತೆ ಭಾರತವನ್ನು ದೂಷಿಸುತ್ತಿರುವ ನೇಪಾಳಿ ನಾಯಕರು, ಅಗತ್ಯ ವಸ್ತುಗಳ ಟ್ರಕ್ ಗಳನ್ನು ಬಲವಂತವಾಗಿ ಗಡಿಯಲ್ಲಿಯೇ ನಿಲ್ಲಿಸುವ ಮೂಲಕ ಭಾರತ  ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ನೇಪಾಳದ ಮುಂದಿನ ಪ್ರಧಾನಿ ಎಂದೇ ಬಿಂಬಿಸಲಾಗುತ್ತಿರುವ ಕೆಪಿ ಓಲಿ  ಅವರು, ನೇಪಾಳದಲ್ಲಿ ಜಾರಿಗೆ ತಂದಿರುವ ಹೊಸ ಸಂವಿಧಾನಕ್ಕೆ ಭಾರತದ ವಿರೋಧವಿದ್ದು, ಗಡಿಯಲ್ಲಿ ಅಗತ್ಯ ವಸ್ತುಗಳ ಟ್ರಕ್ ಗಳನ್ನು ತಡೆ ಹಿಡಿಯುವ ಮೂಲಕ ತನ್ನ ವಿರೋಧವನ್ನು  ವ್ಯಕ್ತಪಡಿಸುತ್ತಿದೆ. ಆ ಮೂಲಕ ಅಂತಾರಾಷ್ಟ್ರೀಯ ವ್ಯಾಪಾರ ಕಾನೂನನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಭಾರತದ ತಿರುಗೇಟು
ಇನ್ನು ನೇಪಾಳ ರಾಜಕೀಯ ಮುಖಂಡರ ಆರೋಪಗಳನ್ನು ತಳ್ಳಿ ಹಾಕಿರುವ ಭಾರತ, ನೇಪಾಳಿ ನಾಯಕರ ಆರೋಪಗಳಲ್ಲಿ ಯಾವುದೇ ರೀತಿಯ ಹುರುಳಿಲ್ಲ. ಈಗಾಗಲೇ ಅಗತ್ಯ ವಸ್ತುಗಳನ್ನು  ಮತ್ತು ಇಂಧನ ಹೊತ್ತ ಟ್ರಕ್ ಗಳು ಭಾರತದಿಂದ ಹೊರಟು ನೇಪಾಳದ ಗಡಿಯಲ್ಲಿ ನಿಂತಿವೆ. ಗಡಿಗೆ ಬಂದ ಟ್ರಕ್ ಗಳನ್ನು ದೇಶದೊಳಗೆ ಸುರಕ್ಷಿತವಾಗಿ ಕರೆಯಿಸಿಕೊಳ್ಳುವ ಹೊಣೆ ನೇಪಾಳ  ಸರ್ಕಾರದ್ದೇ ಹೊರತು, ನಮ್ಮದಲ್ಲ. ನಾವು ಹೋಗಿ ನೇಪಾಳದಲ್ಲಿ ಟ್ರಕ್ ಗಳಿಗೆ ರಕ್ಷಣೆ ಕೊಡಲು ಸಾಧ್ಯವಿಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ