ನರೇಂದ್ರ ಮೋದಿ 
ವಿದೇಶ

ತೈಲರಾಷ್ಟ್ರ ಸೌದಿ ಅರೇಬಿಯಾ ತಲುಪಿದ ಪ್ರಧಾನಿ ನರೇಂದ್ರ ಮೋದಿ

ತೈಲ ಶ್ರೀಮಂತ ರಾಷ್ಟ್ರ ಸೌದಿ ಅರೇಬಿಯಾಕ್ಕೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಚೊಚ್ಚಲ ಪ್ರವಾಸದಲ್ಲಿ 2 ದಿನಗಳ ಭೇಟಿ ಸಲುವಾಗಿ ರಿಯಾಧ್​ಗೆ ಆಗಮಿಸಿದ್ದಾರೆ...

ರಿಯಾಧ್: ತೈಲ ಶ್ರೀಮಂತ ರಾಷ್ಟ್ರ ಸೌದಿ ಅರೇಬಿಯಾಕ್ಕೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಚೊಚ್ಚಲ ಪ್ರವಾಸದಲ್ಲಿ  2 ದಿನಗಳ ಭೇಟಿ ಸಲುವಾಗಿ ರಿಯಾಧ್​ಗೆ ಆಗಮಿಸಿದ್ದಾರೆ.

ರಿಯಾದ್ ಗವರ್ನರ್ ರಾಜಕುಮಾರ ಫೈಸಲ್ ಬಿನ್ ಬಂದರ್ ಬಿನ್ ಅಬ್ದುಲಾಜೀಜ್ ಅವರು ಮೋದಿ ಅವರನ್ನು ಸ್ವಾಗತಿಸಿದರು. ಎರಡು ದಿನಗಳ ಈ ಭೇಟಿ ಕಾಲದಲ್ಲಿ ಉಭಯ ರಾಷ್ಟ್ರಗಳು ಭದ್ರತೆ ವಿಸ್ತರಣೆ ಹಾಗೂ ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಮಹತ್ವದ ಪಾಲುದಾರಿಕೆ ಮಾರ್ಗಗಳ ಬಗ್ಗೆ ಚರ್ಚಿಸಲಿವೆ.

ಮೋದಿ ಮತ್ತು ಸೌದಿ ಅರೇಬಿಯಾ ನಾಯಕತ್ವದ ನಡುವಣ ಮಾತುಕತೆಯಲ್ಲಿ ಉಗ್ರವಾದದ ಬೆದರಿಕೆಯ ನಿಗ್ರಹ ಮತ್ತು ಬಾಂಧವ್ಯ ಸುಧಾರಣೆ ಪ್ರಮುಖವಾಗಿ ಪ್ರಸ್ತಾಪಗೊಳ್ಳುವ ನಿರೀಕ್ಷೆ ಇದೆ. ಇಸ್ಲಾಮ್ ಆಧ್ಯಾತ್ಮಿಕ ನೆಲೆ ಎಂದೇ ಪರಿಚಿತವಾರುವ ಸೌದಿ ಅರೇಬಿಯಾವು ಇತ್ತೀಚೆಗೆ ಭಯೋತ್ಪಾದನೆ ಅದರಲ್ಲೂ ನಿರ್ದಿಷ್ಟವಾಗಿ ಐಸಿಸ್ ವಿರುದ್ಧ ಸಮರಕ್ಕಾಗಿ 34 ಮುಸ್ಲಿಮ್ ರಾಷ್ಟ್ರಗಳ ಒಕ್ಕೂಟವನ್ನು ರಚಿಸಿತ್ತು.

ಕಳೆದ ಎರಡು ದಶಕಗಳಲ್ಲಿ ತೈಲ ಉತ್ಪಾದಕ ರಾಷ್ಟಗಳಾದ ಭಾರತ ಮತ್ತು ಸೌದಿ ಅರೇಬಿಯಾ ಬಾಂಧವ್ಯ ವರ್ಧಿಸಿದೆ. ಇಂಧನ ಕ್ಷೇತ್ರವಲ್ಲದೆ, ರಿಫೈನರಿ ಮತ್ತು ತೈಲ ಕ್ಷೇತ್ರಗಳಲ್ಲಿ ಜಂಟಿ ಸಾಹಸ ನಿಟ್ಟಿನಲ್ಲಿ ಮುಂದೆ ಸಾಗಲೂ ಉಭಯ ರಾಷ್ಟ್ರಗಳೂ ಗಮನ ಹರಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!