ವಿದೇಶ

ಸಾಮೂಹಿಕ ಅತ್ಯಾಚಾರಕ್ಕೆ 1,200 ಕೆ.ಜಿ ಗೋಧಿ ದಂಡ!

Manjula VN

ಇಸ್ಲಾಮಾಬಾದ್: ಅಪ್ರಾಪ್ರ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಕಾರಣಕ್ಕೆ ಇಲ್ಲಿನ ಗ್ರಾಮದ ಮುಖಂಡರು ಆರೋಪಿಗಳಿಗೆ ಪರಿಹಾರವಾಗಿ 1,200 ಕೆಜಿ ಗೋಧಿ ನೀಡುವಂತೆ ಆದೇಶ ಹೊರಡಿಸಿರುವ ಘಟನೆಯೊಂದು ಪಾಕಿಸ್ತಾನದಲ್ಲಿ ವರದಿಯಾಗಿದೆ.

ಸಿಂಧ್ ಪ್ರಾಂತ್ಯದ ಉಮರ್ಕೋಟ್ ಜಿಲ್ಲೆಯೊಂದರ ಗ್ರಾಮದಲ್ಲಿ 14 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿದ್ದ ಕಾಮುಕರು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥ ಮಾಡುವಂತೆ ಗ್ರಾಮದ ಮುಖಂಡರನ್ನು ಒತ್ತಾಯಿಸಿದ್ದಾನೆ. ಇದರಂತೆ ಗ್ರಾಮದ ಮುಖಂಡರು ಸೇರಿ ಗ್ರಾಮದಲ್ಲಿ ಚಾಲ್ತಿಯಿರುವ ಸಾಂಪ್ರದಾಯಿಕ ಜಿರ್ಗಾ ಪದ್ಧತಿಯ ಅಡಿಯಲ್ಲಿ ನ್ಯಾಯಾ ಪಂಚಾಯಿತಿ ನಡೆಸಿದ್ದಾರೆ. ವಾದ ವಿವಾದದ ನಂತರ ಮುಖಂಡರು ಸಂತ್ರಸ್ತೆಗೆ ಪರಿಹಾರವಾಗಿ 1,200 ಕೆಜಿ ಗೋಧಿ ನೀಡುವಂತೆ ಶಿಕ್ಷೆ ವಿಧಿಸಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅತ್ಯಾಚಾರಕ್ಕೊಳಗಾದ ಬಾಲಕಿಯ ತಂದೆ, ಪ್ರಕರಣ ದಾಖಲಿಸಿದ ದಿನದಿಂದಲೂ ನಮಗೆ ಸಾಕಷ್ಟು ಬೆದರಿಕೆಗಳು ಬಂದಿತ್ತು. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು, ಆದರೆ, ಜಿರ್ಗಾ ಸಂಪ್ರದಾಯದಂತೆ ರಾಜಿ ಸಂಧಾನ ಮಾಡಿಕೊಂಡು ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳುವಂತೆ ಬಲವಂತ ಮಾಡಲಾಗಿತ್ತು. ಇದರಂತೆ ಪಂಚಾಯಿತಿ ನಡೆಸಿ ಆರೋಪಿಗೆ 1,200ಕೆಜೆ ಗೋಧಿ ನೀಡುವಂತೆ ಶಿಕ್ಷೆ ವಿಧಿಸಿದರು.

ಪರಿಹಾರವನ್ನು ಒಪ್ಪಿಕೊಳ್ಳದಿದ್ದರೆ ಊರು ಬಿಟ್ಟು ಹೋಗುವಂತೆ ತಿಳಿಸಿದರು. ಇನ್ನು ಸ್ಥಳೀಯ ಮಾಧ್ಯಮಗಳು ಈ ವಿಚಾರವನ್ನು ಬಯಲಿಗೆಳೆಯುತ್ತಿದ್ದಂತೆ ನಮ್ಮ ಮೇಲಿನ ಬೆದರಿಕೆಗಳು ಮತ್ತಷ್ಟು ಹೆಚ್ಚಾಗತೊಡಗಿತು. ಅಲ್ಲದೆ, ಪ್ರಕರಣದಲ್ಲಿ ಮೌನವಹಿಸಿ ದೂರನ್ನು ಹಿಂಪಡೆಯುವಂತೆ ತಿಳಿಸಿದ್ದರು ಎಂದು ಆರೋಪಿಸಿದ್ದಾರೆ.

SCROLL FOR NEXT