ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೂ 
ವಿದೇಶ

1914ರಲ್ಲಿ ಸಿಖ್ ವಲಸಿಗರನ್ನು ವಾಪಸ್ ಕಳುಹಿಸಿದಕ್ಕೆ ಕ್ಷಮೆ ಕೋರುವೆ: ಕೆನಡಾ ಪ್ರಧಾನಿ

376 ಸಿಖ್ ಪ್ರಯಾಣಿಕರಿದ್ದ ಕೊಮಗಟ ಹಡಗನ್ನು 1914ರಲ್ಲಿ ಬಲವಂತವಾಗಿ ವಾಪಸ್ ಕಳುಹಿಸಿದ ಅಂದಿನ ಸರ್ಕಾರದ...

ಒಟಾವಾ: 376 ಸಿಖ್ ಪ್ರಯಾಣಿಕರಿದ್ದ ಕೊಮಗಟ ಹಡಗನ್ನು 1914ರಲ್ಲಿ ಬಲವಂತವಾಗಿ ವಾಪಸ್ ಕಳುಹಿಸಿದಕ್ಕೆ ನಾನು ಮೇ 18ರಂದು ಕ್ಷಮೆಯಾಚಿಸುವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೂ ಹೇಳಿದ್ದಾರೆ. 
ಅಂದು ಆಶ್ರಯ ಬಯಸಿ ಬಂದ ಸಿಖ್ ಜನಾಂಗವನ್ನು ವಾಪಸ್ ಕಳುಹಿಸಿ ಅವರನ್ನು ತೊಂದರೆಗೆ ಸಿಲುಕಿಸಿದ ಘಟನೆಯನ್ನು ನಾವು ಮರೆಯಬಾರದು, ಹಾಗೆ ನಾವು ಮರೆಯುವುದಿಲ್ಲ ಎಂದ ಅವರು, ಕೊಮಗಟ ಹಡಗು ಘಟನೆಗೆ ಸಂಬಂಧಿಸಿದಂತೆ ನಾನು ಹೌಸ್ ಆಫ್ ಕಾಮನ್ಸ್ ನಲ್ಲಿ ಮೇ 18 ರಂದು ಕ್ಷಮೆಯಾಚಿಸುವೆ ಎಂದು ಅವರು ತಿಳಿಸಿದ್ದಾರೆ. 
ಮಲೇಷ್ಯಾ ಮೂಲದ ಶ್ರೀಮಂತ ಸಿಖ್ ಗುರುದಿತ್ ಸಿಂಗ್ ಎಂಬಾತ ವ್ಯಾಂಕೊವರ್‌ನ ಜನಾಂಗೀಯ ಕಾಯಿದೆ ವಿರೋಧಿಸಿ 376 ಭಾರತೀಯರನ್ನು ಹಾಂಕಾಂಗ್ ಮಾರ್ಗವಾಗಿ ವ್ಯಾಂಕೊವರ್‌ಗೆ ಕರೆದೊಯ್ಯಲು 1914ರಲ್ಲಿ ಜಪಾನ್‌ನ ಕೊಮಗಟ ಹಡಗನ್ನು ಬಾಡಿಗೆ ಪಡೆದಿದ್ದ. ಆದರೆ ವ್ಯಾಂಕೊವರ್ ಬಂದರಿನ ಬಳಿ ಬಂದ ಆ ಹಡಗು ನಿಲುಗಡೆಗೆ ಅವಕಾಶ ನೀಡದೇ, ಎರಡು ತಿಂಗಳು ಕಾಯಿಸಿದ ನಂತರ ಬಲವಂತವಾಗಿ ಭಾರತಕ್ಕೆ ವಾಪಸು ಕಳುಹಿಸಲಾಗಿತ್ತು. 
ಅವರೆಲ್ಲಾ ಕೋಲ್ಕತ್ತಗೆ ಬಂದಿಳಿಯುತ್ತಿದ್ದಂತೆಯೇ ಪೊಲೀಸರು ಗುಂಡು ಹಾರಿಸಿ ಹಲವಾರು ಮಂದಿಯನ್ನು ಹತ್ಯೆ ಮಾಡಿದ್ದರು. ಅಂದು ಹಡಗಿನಲ್ಲಿದ್ದ ಪ್ರಯಾಣಿಕರು ಕೆನಡಾ ಪ್ರವೇಶಕ್ಕೆ 15000 ಡಾಲರ್ ಹಣವನ್ನು ‘ಪ್ರವೇಶ ತೆರಿಗೆ’ ರೂಪದಲ್ಲಿ ಪಾವತಿ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

KPSC ನೇಮಕಾತಿ ಹಗರಣ: DGP ಅಲೋಕ್ ಕುಮಾರ್ ಸೇರಿ SIT ತಂಡದಿಂದ ಇಬ್ಬರು ಔಟ್; ಸುಪ್ರೀಂಕೋರ್ಟ್ ಮಹತ್ವದ ಸೂಚನೆ!

ಸ್ಟ್ರಿಂಗ್ ಆಪರೇಷನ್ ವಿಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲ; ಚಾರಿತ್ರ್ಯಹನನದ ಪ್ರಯತ್ನ- ಸಿದ್ದರಾಮಯ್ಯ