ಕಾರವಾರ: ಇಲ್ಲಿನ ಐಎನ್‌ಎಸ್ ಕದಂಬ ನೌಕಾನೆಲೆಗೆ ಇದೇ ಮೊದಲ ಬಾರಿಗೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಎಶ್ಟೋನ್ ಕಾರ್ಟರ್ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಜತೆ ಸೋಮವಾರ ಭೇಟಿ ನೀಡಿದರು.
ಮನೋಹರ ಪರ್ರಿಕರ್ ಅವರೊಂದಿಗೆ ಕಾರ್ಟರ್ ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧನೌಕೆಯನ್ನು ಏರಿ ಪರಿಶೀಲಿಸಿದರು. ಗೋವಾದ ಹಂಸ ನೌಕಾನೆಲೆಯಿಂದ ಬೆಳಗ್ಗೆ 10.45ರ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಕಾರ್ಟರ್ ಮತ್ತು ಮನೋಹರ್ ಪರಿಕರ್ ಅವರಿಗೆ ಕದಂಬ ನೌಕಾನೆಲೆಯ ತುಕಡಿಯಿಂದ ಗೌರವ ವಂದನೆ ಸಲ್ಲಿಸಲಾಯಿತು. ನಂತರ ವಿಕ್ರಮಾದಿತ್ಯ ನೌಕೆಗೆ ತೆರಳಿ ಪರಿಶೀಲನೆ ನಡೆಸಿದರು.
ನಂತರ ಅಲ್ಲಿಯೇ ಊಟ ಮುಗಿಸಿ 2 ಗಂಟೆಯ ಸುಮಾರಿಗೆ ಗೋವಾಕ್ಕೆ ವಾಪಸಾದರು.