ವಿದೇಶ

'ಅಮೇರಿಕಾ ಮೊದಲು' ವಿದೇಶಾಂಗ ನೀತಿಗೆ ಟ್ರಂಪ್ ಒತ್ತು

Srinivas Rao BV

ವಾಷಿಂಗ್ ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಲು ಸ್ಪರ್ಧಿಸುತ್ತಿರುವ ಡೊನಾಲ್ಡ್ ಟ್ರಂಪ್  5 ರಾಜ್ಯಗಳ ಪ್ರೈಮರಿಗಳಲ್ಲಿ ವಿಜಯ ಸಾಧಿಸಿದ್ದು ಅಮೆರಿಕ ಫಸ್ಟ್ ವಿದೇಶಾಂಗ ನೀತಿಯನ್ನು ಸಿದ್ಧಪಡಿಸಿದ್ದಾರೆ.

"ಅಮೆರಿಕ ವಿದೇಶಾಂಗ ನೀತಿಗೆ ಹಿಡಿದಿರುವ ತುಕ್ಕನನ್ನು ತೆಗೆದುಹಾಕುವ ಸಮಯ ಬಂದಿದೆ. ನನ್ನ ವಿದೇಶಾಂಗ ನೀತಿಗಳು ಅಮೆರಿಕಾದ ಜನತೆ, ದೇಶದ ಭದ್ರತೆಗೆ ಎಲ್ಲದಕ್ಕಿಂತ ಹೆಚ್ಚಿನ ಆದ್ಯತೆ ನೀಡಲಿದೆ. ಅಮೆರಿಕ ಮೊದಲೆಂಬ ತತ್ವ ನನ್ನ ಪ್ರತಿಯೊಂದು ನಿರ್ಧಾರದಲ್ಲೂ ಇರಲಿದೆ ಎಂದು ಮೇಫ್ಲವರ್ ಹೊಟೇಲ್ ನಲ್ಲಿ ಭಾಷಣ ಮಾಡಿರುವ ಟ್ರಂಪ್ ತಿಳಿಸಿದ್ದಾರೆ. 
ಇದೇ ಭಾಷಣದಲ್ಲಿ ಇರಾನ್ ನೊಂದಿಗೆ ಅಮೆರಿಕದ ಹಾಲಿ ಅಧ್ಯಕ್ಷ ಬರಾಕ್ ಒಬಾಮ ಅವರ ಪರಮಾಣು ನೀತಿ ಹಾಗು ಕ್ಯೂಬಾ ಭೇಟಿಯನ್ನು ಟೀಕಿಸಿರುವ ಡೊನಾಲ್ಡ್ ಟ್ರಂಪ್,  ಇಸ್ಲಾಮಿಕ್ ಉಗ್ರ ಸಂಘಟನೆಯ ವಿರುದ್ಧ ನಾನು ಊಹೆಗೂ ಮೀರಿದ ರೀತಿಯಲ್ಲಿ ಹೋರಾಡುತ್ತೇನೆ ಎಂದು ಹೇಳಿದ್ದಾರೆ.

SCROLL FOR NEXT