ವಿದೇಶ

ಎಫ್-16 ಪೂರೈಕೆ ಸಬ್ಸಿಡಿಗೆ ಕತ್ತರಿ ಹಾಕಿದರೂ, ಹಳೆಯ ವರಸೆ ಮುಂದುವರೆಸಿದ ಅಮೆರಿಕ!

ಸಬ್ಸಿಡಿಗೆ ಕತ್ತರಿ ಹಾಕಿದ್ದರೂ ತನ್ನ ಹಳೆಯ ವರಸೆಯನ್ನು ಮುಂದುವರೆಸಿದ್ದು, ಪಾಕ್ ಗೆ ಅಮೆರಿಕ ಪೂರೈಕೆ ಮಾಡಲಿರುವ ಎಫ್ 16 ಯುದ್ಧ ವಿಮಾನ ಭಯೋತ್ಪಾದನೆ ವಿರುದ್ಧ ಬಳಕೆಯಾಗುವುದುಖಚಿತ ಎಂದಿದೆ.

ಇಸ್ಲಾಮಾಬಾದ್: ಅತ್ಯಾಧುನಿಕ ಎಫ್ 16 ಯುದ್ಧ ವಿಮಾನವನ್ನು ಖರೀದಿಸುವುದಕ್ಕೆ ಪಾಕಿಸ್ತಾನಕ್ಕೆ ನೀಡಬೇಕಿದ್ದ ಸಬ್ಸಿಡಿಗೆ ಕತ್ತರಿ ಹಾಕಿದ್ದ ಅಮೆರಿಕ ಈಗ ತನ್ನ ಹಳೆಯ ವರಸೆಯನ್ನು ಮುಂದುವರೆಸಿದ್ದು, ಪಾಕ್ ಗೆ ಅಮೆರಿಕ ಪೂರೈಕೆ ಮಾಡಲಿರುವ ಎಫ್ 16 ಯುದ್ಧ ವಿಮಾನ ಭಯೋತ್ಪಾದನೆ ವಿರುದ್ಧ ಬಳಕೆಯಾಗುವುದು ಖಚಿತ ಎಂದು ಹೇಳಿದೆ.
ಅಮೆರಿಕದ ರಕ್ಷಣಾ ಸಚಿವಾಲಯ ಈ ಹೇಳಿಕೆ ನೀಡಿದ್ದು, ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುತ್ತಿರುವ ಪಾಕಿಸ್ತಾನಕ್ಕೆ ಸಹಾಯ ಮಾಡಲು ಎಫ್ 16 ಪೂರೈಕೆ ನಿರ್ಧಾರ ಸೂಕ್ತವಾಗಿದೆ. ಈ ಹಿಂದೆಯೂ ಪಾಕಿಸ್ತಾನ ಅನೇಕ ಬಾರಿ ಭಯೋತ್ಪಾದಕರ ವಿರುದ್ಧ ದಾಳಿ ನಡೆಸಿರುವ ಉದಾಹರಣೆಗಳಿವೆ ಎಂದು ಅಮೆರಿಕ ರಕ್ಷಣಾ ಸಚಿವಾಲಯದ ಉಪವಕ್ತಾರ ಮಾರ್ಕ್ ಟೋನರ್ ಹೇಳಿದ್ದಾರೆ. 
ಅಮೆರಿಕ ರಕ್ಷಣಾ ಸಚಿವಾಲಯದ ಈ ಹೇಳಿಕೆಯಿಂದ, ಎಫ್ 16 ಯುದ್ಧ ವಿಮಾನಗಳನ್ನು ಪೂರೈಸಿದರೆ ಅವುಗಳು ಭಯೋತ್ಪಾದಕರ ವಿರುದ್ಧ ಬಳಕೆಯಾಗುವುದಕ್ಕಿಂತ ಹೆಚ್ಚಾಗಿ ಭಾರತದ ವಿರುದ್ಧ ಬಳಕೆಯಾಗುವ ಸಂಭವ ಹೆಚ್ಚಿದೆ ಎಂba ಅಮೆರಿಕದ ಕೆಲವು ಶಾಸಕರ ಹೇಳಿಕೆಯನ್ನೇ ತಿರಸ್ಕರಿಸುವಂತಿದೆ.
ಸಬ್ಸಿಡಿ ದರದಲ್ಲಿ ಪಾಕಿಸ್ತಾನಕ್ಕೆ 8 ಎಫ್ 16 ಯುದ್ಧ ವಿಮಾನವನ್ನು ನೀಡುವ ಬಗ್ಗೆ ತನ್ನ ನಿಲುವನ್ನು ಬದಲಿಸಿದ್ದ ಅಮೆರಿಕ, ಪಾಕಿಸ್ತಾನಕ್ಕೆ ನೀಡಿದ್ದ ಭಾರಿ ಪ್ರಮಾಣದ ಸಬ್ಸಿಡಿಯನ್ನು ಕೈಬಿಟ್ಟಿತ್ತು. ಆದರೂ ಪಾಕಿಸ್ತಾನಕ್ಕೆ ಯುದ್ಧ ವಿಮಾನ ಪೂರೈಕೆ ಮಾಡುವುದರಿಂದ ಉಂಟಾಗಬಹುದಾದ ಅನಾಹುತಗಳನ್ನು ಅಮೆರಿಕ ಗಂಭೀರವಾಗಿ ಪರಿಗಣಿಸದೇ ಹಳೆಯ ವರಸೆಯನ್ನೇ ಮುಂದುವರೆಸಿದೆ.
ಇನ್ನು ಪಾಕಿಸ್ತಾವೂ ತನ್ನ ಪ್ರಯತ್ನವನ್ನು ಮುಂದುವರೆಸಿದ್ದು, ಪಾಕಿಸ್ತಾನಕ್ಕೆ ಯುದ್ಧ ವಿಮಾನ ಪೂರೈಕೆ ಮಾಡುವ ಒಪ್ಪಂದದ ಬಗ್ಗೆ ಕಾಂಗ್ರೆಸ್ ನ್ನು ಒಪ್ಪಿಸುವುದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಹೊಣೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ವಿದೇಶಾಂಗ ವ್ಯವಹಾರಗಳ ವಿಶೇಷ ಸಹಾಯಕ ತರೀಖ್ ಫತೇಮಿ ಹೇಳಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು, ಯುದ್ಧ ವಿಮಾನ ಪೂರೈಕೆ ಒಪ್ಪಂದದ ಕುರಿತು ಅಮೆರಿಕದ ಪ್ರಮುಖ ಸಂಸದರೊಂದಿಗೆ ಪಾಕಿಸ್ತಾನ ರಾಯಭಾರಿ ಕಚೇರಿ ನಿರಂತರ ಸಂಪರ್ಕದಲ್ಲಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!