ಮೋಹನ್ ಭಾಗವತ್ 
ವಿದೇಶ

ಆಕ್ರಮಣಶೀಲ ಮತಾಂತರಕ್ಕೆ ಹಿಂದೂ ಧರ್ಮ ಅವಕಾಶ ನೀಡುವುದಿಲ್ಲ: ಮೋಹನ್ ಭಾಗವತ್

ಹಿಂದೂ ಸಂಸ್ಕೃತಿ ಆಕ್ರಮಣಶೀಲ ಮತಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದು ಆರ್ ಎಸ್ಎಸ್ ನ ಮುಖಂಡ ಮೋಹನ್ ಭಾಗವತ್ ತಿಳಿಸಿದ್ದಾರೆ.

ಲಂಡನ್: ಹಿಂದೂ ಸಂಸ್ಕೃತಿ ಆಕ್ರಮಣಶೀಲ ಮತಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದು ಆರ್ ಎಸ್ಎಸ್ ನ ಮುಖಂಡ ಮೋಹನ್ ಭಾಗವತ್ ತಿಳಿಸಿದ್ದಾರೆ. 
ಹಿಂದುತ್ವ ಒಂದು ಧರ್ಮವಲ್ಲ, ಜೀವನ ವಿಧಾನವಾಗಿದ್ದು ಎಲ್ಲಾ ಅನನ್ಯತೆಗಳನ್ನು ಒಪ್ಪುವ, ಗೌರವಿಸುವ ಸಂಸ್ಕೃತಿಯಾಗಿದೆ, ಬೇರೆ ಯಾವುದೇ ತತ್ವ, ಧರ್ಮವನ್ನು ಅವಲೋಕಿಸಿದ ನಂತರ, ವ್ಯಕ್ತಿಯೋರ್ವ ತನ್ನ ಸ್ವಇಚ್ಛೆಯಿಂದ ಮತಾಂತರವಾಗುವುದಾದರೆ ಅದನ್ನು ನಮ್ಮ ಸಂಸ್ಕೃತಿ ಒಪ್ಪುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಮತ ಯಾವುದಾಗಿರಬೇಕೆಂಬ ನಿರ್ಧಾರವನ್ನು ಹೊಂದಿರಬಹುದು ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಆದರೆ ಆಕ್ರಮಣಶೀಲ ಮತಾಂತರವನ್ನು ನಮ್ಮ ಸಂಸ್ಕೃತಿ ಒಪ್ಪುವುದಿಲ್ಲ, ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಯುಕೆ ಮೂಲದ ಹಿಂದೂ ಸ್ವಯಂ ಸೇವಕ ಸಂಘ(  ಹೆಚ್ಎಸ್ ಎಸ್) ಆಯೋಜಿಸಿದ್ದ ಐಡೆಂಟಿಟಿ, ಇಂಟಿಗ್ರೇಷನ್ ಎಂಬ ವಿಷಯದ ಬಗ್ಗೆ ಆರ್ ಎಸ್ ಎಸ್ ನ ಸರಸಂಘಚಾಲಕರು ಮಾತನಾಡುತ್ತಿದ್ದರು. ಬೇರೆ ಮತಗಳಲ್ಲಿ ನಮಗೆ  ಸಮಸ್ಯೆ ಇಲ್ಲ. ಒಗ್ಗಟ್ಟಿನಿಂದ ಇರಬಹುದು ಎಂಬುದನ್ನು ಹಿಂದೂ ತಾನು ಜೀವಿಸುವೆಲ್ಲೆಡೆ ಸಾರುತ್ತಾನೆ. ವಿವಿಧತೆಯನ್ನು ಆಚರಿಸಬೇಕೆಂದು ಹಿಂದುತ್ವ ಹೇಳುತ್ತದೆ ಎಂದು ಮೋಹನ್ ಭಾಗವತ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!