ವಿದೇಶ

ಇಸಿಸ್ ಪರ ಒಲವು ಹೊಂದಿದ್ದವರಿಗೆ ಹಣದ ನೆರವು ನೀಡುತ್ತಿದ್ದ ಕುವೈತ್ ಶಂಕಿತ ಬಂಧನ

Sumana Upadhyaya
ಕುವೈತ್: ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ಗುಂಪಿನ ಜೊತೆ ಸಂಪರ್ಕ ಹೊಂದಿದ್ದಾನೆ ಎಂಬ ಸಂಶಯದ ಮೇಲೆ ವ್ಯಕ್ತಿಯೊಬ್ಬನನ್ನು ಕುವೈತ್ ನಲ್ಲಿ ಬಂಧಿಸಲಾಗಿದೆ.
ಅಧಿಕಾರಿಗಳು ಕುವೈತ್ ನಲ್ಲಿ ಅಬ್ದುಲ್ಲಾ ಹಡಿ ಅಬ್ದುಲ್ ರೆಹಮಾನ್ ಅಲ್ ಎನೆಝಿ ಎಂಬಾತನನ್ನು ಬಂಧಿಸಿದ್ದಾರೆ. ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ ನೀಡಿದ ಸುಳಿವಿನ ಆಧಾರದಲ್ಲಿ ಬಂಧಿಸಲಾಗಿದೆ.
ಉಗ್ರಗಾಮಿಗಳಿಗೆ ಹಣ ಒದಗಿಸುವುದು ಮತ್ತು ಇಸಿಸ್ ಉಗ್ರಗಾಮಿ ಗುಂಪಿಗೆ ಯುವಕರ ನೇಮಕಾತಿಯಲ್ಲಿ ಅಲ್ ಎನೆಜಿ ಭಾಗಿಯಾಗಿದ್ದ ಎಂದು ರಾಷ್ಟ್ರೀಯ ತನಿಖಾಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಬಂಧಿತ ಶಂಕಿತ ಆರೋಪಿ ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡುತ್ತಿದುದಾಗಿ ಮತ್ತು ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುತ್ತಿದುದಾಗಿ 
ಒಪ್ಪಿಕೊಂಡಿದ್ದಾನೆ. ಆತ ಈ ಅಕ್ರಮ ಚಟುವಟಿಕೆಯನ್ನು 2013ರಲ್ಲಿ ಪಾಕಿಸ್ತಾನದಿಂದ ಕುವೈತ್ ಗೆ ಹಿಂತಿರುಗಿದ ನಂತರ ಮಾಡುತ್ತಿದ್ದ.
2014ರಲ್ಲಿ ಇಸಿಸ್ ಗೆ ಸೇರಿದ ನಂತರ ಭಾರತಕ್ಕೆ ಮರಳಿದ ಮಹಾರಾಷ್ಟ್ರದ ಪನ್ವೇಲ್ ನ ಅರೀಬ್ ಮಜೀದ್ ಸೇರಿದಂತೆ ಇಸಿಸ್ ಬಗ್ಗೆ ಭಾರತದಲ್ಲಿ ಒಲವು ಹೊಂದಿರುವ ಅನೇಕರಿಗೆ ಅಲ್ ಎನೆಜಿ ಹಣಕಾಸು ನೆರವು ನೀಡುತ್ತಿದ್ದುದಾಗಿ ನಂಬಲಾಗಿದೆ.
ಅರೀಬ್ 2014ರಿಂದ ಬಂಧನದಲ್ಲಿದ್ದು, ಅಲ್ ಎನೆಜಿ ತನಗೆ ಮತ್ತು ತನ್ನ ಮೂವರು ಸಹಚರರಿಗೆ ಸಾವಿರ ಡಾಲರ್ ಹಣ ಕಳುಹಿಸಿದ್ದನು ಎಂದು ತನಿಖೆ ವೇಳೆ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ.
SCROLL FOR NEXT