ವಿದೇಶ

ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಜೂಲಿಯನ್ ಅಸ್ಸಾಂಜೆ ವಿಚಾರಣೆಗೆ ಒಪ್ಪಿಗೆ

Guruprasad Narayana

ಲಂಡನ್: ಸ್ವೀಡನ್ ಅಧಿಕಾರಿಗಳು ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರನ್ನು ಲಂಡನ್ನಿನ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಪ್ರಶ್ನಿಸಲು ಒಪ್ಪಿಗೆ ನೀಡಲಾಗಿದೆ ಎಂದು ಗುರುವಾರ ಮಾಧ್ಯವೊಂದು ವರದಿ ಮಾಡಿದೆ.

ಅಸ್ಸಾಂಜೆ ತಳ್ಳಿ ಹಾಕಿರುವ ರೇಪ್ ಆರೋಪದಲ್ಲಿ ಅವರನ್ನು ಪ್ರಶ್ನೆ ಮಾಡಲು ಸ್ವೀಡನ್ ಪ್ರಾಸೆಕ್ಯೂಟರ್ ಗೆ ಅವಕಾಶ ನೀಡಿ ಪತ್ರಕ್ಕೆ ಈಕ್ವೆಡಾರ್ ಅಟಾರ್ನಿ ಜನರಲ್ ಸಹಿ ಹಾಕಿದ್ದಾರೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.

"ಲಂಡನ್ನಿನ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಈ ವಿಚಾರಣೆಗೆ ಅವಕಾಶ ನೀಡಲು ಮುಂದಿನ ವಾರಗಳಲ್ಲಿ ದಿನಾಂಕ ನಿಗದಿಪಡಿಸಲಾಗುವುದು" ಎಂದು ಈಕ್ವೆಡಾರ್ ಹೇಳಿಕೆಯಲ್ಲಿ ತಿಳಿಸಿದೆ.

ಅಸ್ಸಾಂಜೆ ಅವರಿಗೆ ಈಕ್ವೆಡಾರ್ ದೇಶ ರಾಜಕೀಯ ಆಶ್ರಯ ನೀಡಿದ್ದು ನಾಲ್ಕು ವರ್ಷಗಳಿಗಿಂತಲೂ ಹೆಚ್ಚಿನ ಕಾಲ ಲಂಡನ್ನಿನ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಜೀವನ ನಡೆಸಿದ್ದಾರೆ.  

"ರಾಜಕೀಯಪೂರಿತ ಶಿಕ್ಷೆಯ ಭಯದ ಪರಿಸ್ಥಿತಿಯ ನಡುವೆ ಆಗಸ್ಟ್ 2012 ರಲ್ಲಿ ಜೂಲಿಯನ್ ಅಸ್ಸಾಂಜೆಗೆ ಈಕ್ವೆಡಾರ್ ದೇಶ ನೀಡಿರುವ ರಾಜಕೀಯ ಆಶ್ರಯ ಬಗ್ಗೆ ಈಕ್ವೆಡಾರ್ ವಿದೇಶಾಂಗ ಸಚಿವಾಲಯಕ್ಕೆ ಈಗಲೂ ಬದ್ಧತೆ ಇದೆ" ಎಂದು ಕೂಡ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಹಿಂದೆ ಕೂಡ ರಾಯಭಾರ ಕಚೇರಿಯಲ್ಲಿ ವಿಚಾರಣೆ ಎದುರಿಸಲು ಅಸ್ಸಾಂಜೆ ಒಪ್ಪಿಕೊಂಡಿದ್ದರು ಆದರೆ ಸ್ವೀಡಿಶ್ ಅಧಿಕಾರಿಗಳು ಈಗ ಮಾತ್ರ ಇದಕ್ಕೆ ಓಗೊಟ್ಟಿದ್ದಾರೆ.

ಅಮೆರಿಕಾ ದಾಖಲೆಗಳನ್ನು ಸಾರ್ವಜನಿಕಗೊಳಿಸಿದ್ದಕ್ಕೆ ಸ್ವೀಡನ್ ಗೆ ಗಡಿಪಾರು ಮಾಡಿದರೆ ಅಮೆರಿಕಾ ವಶಕ್ಕೆ ನೀಡುವ ಅಪಾಯ ಇದೆ ಎಂದು ಅಸ್ಸಾಂಜೆ ರಾಜಕೀಯ ಆಶ್ರಯ ಕೇಳಿದ್ದರು.

SCROLL FOR NEXT