ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಇಸ್ಲಾಮಿಕ್ ಸ್ಟೇಟ್(ಇಸಿಸ್) ಉಗ್ರ ಸಂಘಟನೆಯ ಸಂಸ್ಥಾಪಕ ಎಂದು ರಿಪಬ್ಲಿಕ್ ನ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದ್ದು ಡೊನಾಲ್ಡ್ ಟ್ರಂಪ್ ಇದೀಗ ಅಮೆರಿಕ ಪ್ರಸ್ತುತ ಅಧ್ಯಕ್ಷ ಒಬಾಮ ವಿರುದ್ಧವೇ ಗುಡುಗಿದ್ದಾರೆ. ಫ್ಲೋರಿಡಾದಲ್ಲಿ ನಡೆದ ರಿಪಬ್ಲಿಕನ್ ರ್ಯಾಲಿಯಲ್ಲಿ ಟ್ರಂಪ್ ಭಾಷಣದ ವೇಳೆ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಯೋತ್ಪಾದಕ ದಾಳಿಯ ಯೋಜನೆ ರೂಪಿಸುವಲ್ಲಿ ಒಬಾಮ ಅವರು ನಿಸ್ಸೀಮರು. ಒಬಮಾ ಭಯೋತ್ಪಾದಕರಿಗೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬಂದಿದ್ದಾರೆ. ಇನ್ನು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಇಸಿಸ್ ನ ಸಹ ಸಂಸ್ಥಾಪಕಿ ಎಂದು ಕಿಡಿಕಾರಿದ್ದಾರೆ.