ಇಸ್ಲಾಮಾಬಾದ್: ಕಾಶ್ಮೀರ ಹಿಂಸಾಚಾರದ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಸಮಸ್ಯೆ ಪರಿಹಾರಕ್ಕೆ ಆಹ್ವಾನ ನೀಡಿರುವುದಾಗಿ ಶುಕ್ರವಾರ ಪಾಕಿಸ್ತಾನ ಹೇಳಿಕೊಂಡಿದೆ.
ಕಾಶ್ಮೀರದಲ್ಲಿ ಭಾರತೀಯ ಸೇನೆ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ವಿಶ್ವಸಂಸ್ಥೆಗೆ ಬರೆದಿದ್ದ ಪತ್ರಕ್ಕೆ ಬಾನ್ ಕಿ ಮೂನ್ ಅವರು ಈ ರೀತಿ ಪ್ರತಿಕ್ರಿಯಿಸಿರುವುದಾಗಿ ಪಾಕ್ ವಿದೇಶಾಂಗ ಕಚೇರಿ ತಿಳಿಸಿದೆ,
ಹಿಂಸಾಚಾರವನ್ನು ತಡೆಯಿರಿ ಎಂದಿರುವ ಬಾನ್ ಕಿ ಮೂನ್, ಜಮ್ಮು ಮತ್ತು ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮಾತುಕತೆಗೆ ತಮ್ಮ ಕಚೇರಿಯಲ್ಲಿ ವೇದಿಕೆ ಕಲ್ಪಿಸುವುದಾಗಿ ಮತ್ತೊಮ್ಮೆ ಹೇಳಿರುವುದಾಗಿ ವಿದೇಶಾಂಗ ಕಚೇರಿ ಸ್ಪಷ್ಟಪಡಿಸಿದೆ.
ಭಾರತ - ಪಾಕಿಸ್ತಾನ ಎರಡೂ ರಾಷ್ಟ್ರಗಳು ಮಾತುಕತೆಯ ಮೂಲಕವೇ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂದು ಬಾನ್ ಕಿ ಮೂನ್ ಅವರು ಹೇಳಿದ್ದಾರೆ.