ವಿದೇಶ

ಭಾರತ ಮೂಲದ ಸಿಖ್ ಮಹಿಳೆ ಬರ್ದಿಶ್ ಕೆನಡ ಸದನದ ನೂತನ ನಾಯಕಿ

Vishwanath S

ಒಟ್ಟಾವ(ಕೆನಡ): ಕೆನಡ ಸಂಸತ್ ಸದಸ್ಯೆಯಾಗಿರುವ ಭಾರತ ಮೂಲದ ಸಿಖ್ ಮಹಿಳೆ ಬರ್ದಿಶ್ ಚಗ್ಗರ್ ಅವರು ಕೆನಡದ ಹೌಸ್ ಆಫ್ ಕಾಮನ್ಸ್ ನಲ್ಲಿ ಸರ್ಕಾರದ ನೂತನ ನಾಯಕಿಯಾಗಿ ನೇಮಕಗೊಂಡಿದ್ದು ರಾಷ್ಟ್ರದ ಇತಿಹಾಸದಲ್ಲೇ ಈ ಹುದ್ದೆಗೆ ನೇಮಕಗೊಂಡಿರುವ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಳೆದ ವರ್ಷ ನಡೆದ ಮಹಾ ಚುನಾವಣೆಯಲ್ಲಿ ಜಯಗಳಿಸಿದ 19 ಮಂದಿ ಭಾರತೀಯ ಮೂಲದ ಅಭ್ಯರ್ಥಿಗಳ ಪೈಕಿ 36ರ ಹರೆಯದ ಚಗ್ಗರ್ ಸಹ ಒಬ್ಬರಾಗಿದ್ದರು. ವಾಟರ್ಲೂ ಕ್ಷೇತ್ರದ ಸ್ಪರ್ಧಿಸಿ ಜಯ ಗಳಿಸಿದ್ದ ಚಗ್ಗರ್ ಸಣ್ಣ ವ್ಯವಹಾರ ಮತ್ತು ಪ್ರವಾಸೋದ್ಯಮ ಸಚಿವೆಯಾಗಿದ್ದಾರೆ.

ಪಾರ್ಲಿಮೆಂಟ್ ಹಿಲ್ ನಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಚಗ್ಗರ್ ಅವರು, ಇದು ಅದ್ಭುತ ಅವಕಾಶವಾಗಿದ್ದು ನಾನು ಜೀವನ ಪೂರ್ತಿ ರಾಜಕೀಯ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಡೊಮಿನಿಕ್ ಲೆಬ್ಲಾಂಕ್ ಅವರ ಸ್ಥಾನದಲ್ಲಿ ನೇಮಕಗೊಂಡಿರುವ ಬರ್ದಿಶ್ ಚಗ್ಗರ್ ಶಾಸನ ರೂಪಿಸುವಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ ಮಾಡಲಿದ್ದಾರೆ.

SCROLL FOR NEXT