ವಿದೇಶ

250 ಪಾಕಿಸ್ಥಾನಿ ನೌಕರರನ್ನು ಗಡಿಪಾರು ಮಾಡಿದ ಅಫ್ಘಾನಿಸ್ಥಾನ

Srinivas Rao BV

ಪಾಕಿಸ್ತಾನ- ಅಫ್ಘಾನಿಸ್ಥಾನ ಗಡಿ ಪ್ರದೇಶ ಚಮನ್ ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಅಫ್ಘಾನಿಸ್ಥಾನ 250 ಪಾಕಿಸ್ಥಾನಿ ನೌಕರರನ್ನು ಗಡಿಪಾರು ಮಾಡಿದೆ.

ಗಡಿ ಪ್ರದೇಶದಲ್ಲಿ ಸತತ 10 ದಿನಗಳಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಅಫ್ಘಾನಿಸ್ಥಾನದ ಪ್ರತಿಭಟನಾ ನಿರತರು ಎರಡು ರಾಷ್ಟ್ರಗಳ ನಡುವಿನ ಫ್ರೆಂಡ್ ಶಿಪ್ ಗೆಟ್ ಮೇಲೆ ದಾಳಿ ನಡೆಸಿ ಪಾಕಿಸ್ಥಾನದ ಧ್ವಜಕ್ಕೆ ಬೆಂಕಿ ಹಚ್ಚಿದ್ದ ಪರಿಣಾಮ ಆಗಸ್ಟ್ 19 ರಿಂದ  ಬಾಬ್ ಇ ದೋಸ್ತಿ ಗೆಟ್ ನ್ನು ಮುಚ್ಚಲಾಗಿದೆ.

ಕಳೆದ 10 ದಿನಗಳಿಂದ ಸುಮಾರು 250 ಪಾಕಿಸ್ಥಾನಿ ನೌಕರರನ್ನು ಗಡಿಪಾರು ಮಾಡಲಾಗಿದೆ ಎಂದು ಕಾಬುಲ್ ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಬಾಬ್-ಈ-ದೋಸ್ತಿ ಗೆಟ್ ಮುಚ್ಚಲಾಗಿರುವ ಪರಿಣಾಮ ಪಾಕಿಸ್ತಾನ- ಅಫ್ಘಾನಿಸ್ಥಾನದ ನಡುವೆ ನಡೆಯುತ್ತಿದ್ದ ನ್ಯಾಟೋ ಸಾಗಣೆ ಸೇರಿದಂತೆ ವಾಣಿಜ್ಯ ವಹಿವಾಟುಗಳು ಸ್ಥಗಿತಗೊಂಡಿವೆ. 

SCROLL FOR NEXT