ವಿದೇಶ

ಟರ್ಕಿ ವಿಮಾನ ನಿಲ್ದಾಣದ ಮೇಲೆ ಉಗ್ರರ ರಾಕೆಟ್ ದಾಳಿ!

Srinivasamurthy VN

ಇಸ್ತಾನ್ ಬುಲ್: ಆಗ್ನೇಯ ಟರ್ಕಿ ಮೇಲೆ ಉಗ್ರರು ರಾಕೆಟ್ ದಾಳಿ ನಡೆಸಿದ್ದು, ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಗ್ನೇಯ ಟರ್ಕಿ ನಗರ ದಿಯಾರ್ ಬಕಿ ನಗರದ ವಿಮಾನ ನಿಲ್ದಾಣದ ಆವರಣದಲ್ಲಿ ರಾಕೆಟ್ ಬಿದ್ದು ಸ್ಫೋಟಗೊಂಡಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪ್ರಯಾಣಿಕರನ್ನು  ಗುರಿಯಾಗಿಸಿಕೊಂಡು ಕುರ್ದಿಶ್ ಪ್ರತ್ಯೇಕತಾವಾದಿಗಳು ಈ ರಾಕೆಟ್ ದಾಳಿ ನಡೆಸಿದ್ದು, ಗುರಿ ತಪ್ಪಿ ರಾಕೆಟ್ ವಿಮಾನ ನಿಲ್ದಾಣದ ಖಾಲಿ ಜಾಗದಲ್ಲಿ ಬಿದ್ದಿದೆ. ಹೀಗಾಗಿ ಯಾವುದೇ  ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಸ್ತುತ ವಿಮಾನ ನಿಲ್ದಾಣವನ್ನು ಸ್ಥಗಿತಗೊಳಿಸಲಾಗಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದಾಳಿ ಹಿಂದೆ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ (ಪಿಕೆಕೆ) ಪ್ರತ್ಯೇಕತಾವಾದಿ ಸಂಘಟನೆ ಕೈವಾಡವಿದೆ ಎಂದು ಶಂಕಿಸಲಾಗಿದೆ. ಕಳೆದ ಮೂರು ದಶಕಗಳಿಂದಲೂ ಕುರ್ದಿಸ್ತಾನ್ ಗಾಗಿ ಪಿಕೆಕೆ ಹೋರಾಟ ನಡೆಸುತ್ತಿದ್ದು, ಟರ್ಕಿ ವಿರುದ್ಧ ಸಮರ ಸಾರಿದೆ.

SCROLL FOR NEXT