ಆಸ್ಟ್ರೇಲಿಯಾ ಪ್ರಧಾನಿ ಮ್ಯಾಕ್ಲಂ ಟರ್ನ್‌ಬುಲ್ 
ವಿದೇಶ

'ರಾಣಿಯ ರಾಜ್ಯಭಾರ ಅಂತ್ಯಗೊಂಡ ಬಳಿಕವಷ್ಟೇ ಆಸ್ಟ್ರೇಲಿಯಾ ಗಣರಾಜ್ಯವಾಗಲು ಸಾಧ್ಯ'

ರಾಣಿಯ ಆಳ್ವಿಕೆ ಅಂತ್ಯಗೊಂಡ ಬಳಿಕವಷ್ಟೇ ಆಸ್ಟ್ರೇಲಿಯಾ ಗಣರಾಜ್ಯವಾಗುವುದಕ್ಕೆ ಸಾಧ್ಯ ಎಂದು ಆಸ್ಟ್ರೇಲಿಯಾದ ಪ್ರಧಾನಿ ಮ್ಯಾಕ್ಲಂ ಟರ್ನ್‌ಬುಲ್ ಹೇಳಿದ್ದಾರೆ.

ಕ್ಯಾನ್ಬೆರಾ: ರಾಣಿಯ ಆಳ್ವಿಕೆ ಅಂತ್ಯಗೊಂಡ ಬಳಿಕವಷ್ಟೇ ಆಸ್ಟ್ರೇಲಿಯಾ ಗಣರಾಜ್ಯವಾಗುವುದಕ್ಕೆ ಸಾಧ್ಯ ಎಂದು ಆಸ್ಟ್ರೇಲಿಯಾದ ಪ್ರಧಾನಿ ಮ್ಯಾಕ್ಲಂ ಟರ್ನ್‌ಬುಲ್ ಹೇಳಿದ್ದಾರೆ. 
ಆಸ್ಟ್ರೇಲಿಯಾದ ಗಣರಾಜ್ಯ ಚಳುವಳಿ (ಎಆರ್ ಎಂ)ಯ 25 ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ಮ್ಯಾಕ್ಲಂ ಟರ್ನ್‌ಬುಲ್, ರಾಣಿ ಎಲಿಜಾಬೆತ್ II ಆಳ್ವಿಕೆ ಅಂತ್ಯವಾದ ನಂತರವಷ್ಟೇ ದೇಶ ಗಣರಾಜ್ಯವಾಗುವುದಕ್ಕೆ ಸಾಧ್ಯ ಎಂದು ಹೇಳಿದ್ದಾರೆ. 
ಆಸ್ಟ್ರೇಲಿಯಾ ಗಣರಾಜ್ಯವಾಗಲಿದೆ ಎಂದು ಪ್ರಧಾನಿ ಮ್ಯಾಕ್ಲಂ ಟರ್ನ್‌ಬುಲ್ ವಿಶ್ವಾಸವ್ಯಕ್ತಪಡಿಸಿದ್ದಾರೆ. 1993, 1999 ಅವಧಿಯಲ್ಲಿ ಆಸ್ಟ್ರೇಲಿಯಾದ ಗಣರಾಜ್ಯ ಚಳುವಳಿಯ ನೇತೃತ್ವ ವಹಿಸಿದ್ದರು. ರಾಣಿ ಎಲಿಜಾಬೆತ್ II ಅವಧಿಯಲ್ಲಿ ಆಸ್ಟ್ರೇಲಿಯಾ ಗಣರಾಜ್ಯವಾಗಲಿದೆ ಎಂದು ಟರ್ನ್‌ಬುಲ್ ಅಭಿಪ್ರಾಯಪಟ್ಟಿದ್ದಾರೆ. 
ಸಂಸತ್ ನಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾವನ್ನು ಗಣತಂತ್ರ  ದೇಶ ಎಂದು ಘೋಷಿಸುವುದಕ್ಕೆ ಬೆಂಬಲ ದೊರೆತಿದೆ ಎಂದು ಎಆರ್ ಎಂ ನ ಮುಖ್ಯಸ್ಥ ಪೀಟರ್ ಫಿಟ್ಜ್ಸಿಮೊನ್ಸ್ ಹೇಳಿದ್ದರು ಈ ಬೆನ್ನಲ್ಲೇ ಪ್ರಧಾನಿ ಮ್ಯಾಕ್ಲಂ ಟರ್ನ್‌ಬುಲ್ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT