ವಿದೇಶ

5,000 ರೂ ನೋಟುಗಳನ್ನು ನಿಷೇಧಿಸಲು ಪಾಕ್ ಸಂಸತ್ ನಲ್ಲಿ ನಿರ್ಣಯ

Srinivas Rao BV
ಇಸ್ಲಾಮಾಬಾದ್: 5,000 ಪಾಕಿಸ್ತಾನಿ ರೂಪಾಯಿ ನೋಟುಗಳನ್ನು ನಿಷೇಧಿಸಲು ಪಾಕಿಸ್ತಾನ ಸಂಸತ್ ನಲ್ಲಿ ನಿರ್ಣಯ ಮಂಡಿಸಲಾಗಿದೆ. ಕಪ್ಪುಹಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. 
ಪಾಕಿಸ್ತಾನ ಮುಸ್ಲಿಂ ಲೀಗ್ ನ ಸಂಸದ ಉಸ್ಮಾನ್ ಸೈಫ್ ಉಲ್ಲಾ ಖಾನ್ ನಿರ್ಣಯವನ್ನು ಮಂಡಿಸಿದ್ದು, ಸಂಸತ್ ನಲ್ಲಿ ನಿರ್ಣಯಕ್ಕೆ ಬಹುತೇಕ ಸಂಸದರಿಂದ ಬೆಂಬಲ ದೊರೆತಿದೆ. 5,000 ಪಾಕಿಸ್ತಾನಿ ರೂಪಾಯಿ ಮುಖಬೆಲೆ ನೋಟುಗಳ ಚಲಾವಣೆ ಬ್ಯಾಂಕ್ ಖಾತೆಗಳ ಬಳಕೆಯನ್ನು ಕಡಿಮೆ ಮಾಡುತ್ತಿದ್ದು, ಲೆಕ್ಕಕ್ಕೆ ಸಿಗದ ಆರ್ಥಿಕತೆಯನ್ನು ಹೆಚ್ಚಿಸುತ್ತಿದೆ ಎಂಬ ಅಭಿಪ್ರಾಯ ಪಾಕಿಸ್ತಾನದ ಸಂಸತ್ ನಲ್ಲಿ ವ್ಯಕ್ತವಾಗಿದೆ. 
ಆದರೆ ಸಂಸದರ ನಿರ್ಣಯಕ್ಕೆ ಪ್ರತಿಕ್ರಿಯೆ ನೀಡಿರುವ ಕಾನೂನು ಸಚಿವ ಜಹೀದ್ ಹಮೀದ್, 5,000 ರೂ ನೋಟುಗಳನ್ನು ವಾಪಸ್ ಪಡೆಯುವುದರಿಂದ ನೋಟು ಬಿಕ್ಕಟ್ಟು ಉಂಟಾಗುತ್ತದೆ, ಅಷ್ಟೇ ಅಲ್ಲದೇ ಜನರು ವಿದೇಶಿ ನೋಟುಗಳನ್ನು ಅವಲಂಬಿಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದಲ್ಲಿ ಚಲಾವಣೆಯಲ್ಲಿರುವ 3.4 ಟ್ರಿಲಿಯನ್ ನೋಟುಗಳ ಪೈಕ್ಕಿ 1.02 ಟ್ರಿಲಿಯನ್ ನೋಟುಗಳು 5,000 ಮುಖಬೆಲೆಯದ್ದಾಗಿವೆ. 
SCROLL FOR NEXT