ಸಾಂದರ್ಭಿಕ ಚಿತ್ರ 
ವಿದೇಶ

ಕೊಲಂಬಿಯಾದ ಕಾರ್ಗೊ ವಿಮಾನ ಪತನ, ಐವರು ಸಿಬ್ಬಂದಿ ಸಾವು

ಕೊಲಂಬಿಯಾದ ಕಾರ್ಗೊ ವಿಮಾನವೊಂದು ಮಂಗಳವಾರ ಸಂಜೆ ಟೇಕಾಫ್ ಆದ ಕೇವಲ ಮೂರು ನಿಮಿಷಗಳಲ್ಲೇ ಪತನವಾಗಿದ್ದು, ಘಟನೆಯಲ್ಲಿ....

ಬೊಗೊಟ: ಕೊಲಂಬಿಯಾದ ಕಾರ್ಗೊ ವಿಮಾನವೊಂದು ಮಂಗಳವಾರ ಸಂಜೆ ಟೇಕಾಫ್ ಆದ ಕೇವಲ ಮೂರು ನಿಮಿಷಗಳಲ್ಲೇ ಪತನವಾಗಿದ್ದು, ಘಟನೆಯಲ್ಲಿ ಐವರು ಸಿಬ್ಬಂದಿ ಮೃತಪಟ್ಟಿದ್ದಾರೆ ಹಾಗೂ ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ, ವಿಮಾನದ ತಂತ್ರಜ್ಞನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರಾಜಧಾನಿ ಬೊಗೊಟಾಗೆ ಕಳುಹಿಸಲಾಗುವುದು ಎಂದು ಕೊಲಂಬಿಯಾ ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.
ದುರಂತಕ್ಕಿಡಾದ ವಿಮಾನ ಬೋಯಿಂಗ್ 727 ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಪೈಲಟ್, ಸಹ ಪೈಲಟ್, ವಿಮಾನದ ಇಂಜಿನಿಯರ್ ಹಾಗೂ ವಿತರಕ ಮೃತಪಟ್ಟಿರುವುದಾಗಿ ಅವರು ಹೇಳಿದ್ದಾರೆ.
ವಿಮಾನ ಪತನಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ತನಿಖಾ ತಂಡ ಸ್ಥಳಕ್ಕೆ ಆಗಮಿಸಿದ್ದು ತನಿಖೆ ನಡೆಸುತ್ತಿರುವುದಾಗಿ ವಿಮಾನಯಾನ ವಕ್ತಾರರು ಎಎಫ್ ಪಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೆ. 9ರಂದು ಗೃಹ ಸಚಿವಾಲಯದೊಂದಿಗೆ ಮಾತುಕತೆಗೆ ಮುನ್ನ ಹೋರಾಟ ತೀವ್ರ: ಲಡಾಖ್ ಉನ್ನತ ಮಂಡಳಿ ಎಚ್ಚರಿಕೆ

ಕೇರಳಂನ ತ್ರಿಶೂರ್‌ನಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ತಮಿಳು ನಾಡಿನ ಎಂಟು ಮಂದಿ ಸಾವು, 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು; Video

ಮತ್ತೊಂದು ಮಹಾಯುದ್ಧದ ಭೀತಿ: ಇರಾನ್‌ನ 'Pickaxe Mountain' ಧ್ವಂಸಕ್ಕೆ ಅಮೆರಿಕ ಸ್ಕೆಚ್, "ಶೀಘ್ರದಲ್ಲೇ ದಾಳಿ" ಎಂದ ಡೊನಾಲ್ಡ್ ಟ್ರಂಪ್..!

ಪ್ರಧಾನಿ ಮೋದಿ ಮೆಚ್ಚಿದ ಇಡ್ಲಿ ನಿಂಗಮ್ಮನಿಗೆ ಸಂಕಷ್ಟ: ಅಂಗಡಿ ನಡೆಸದಂತೆ GBA ಅಧಿಕಾರಿಗಳ ವಾರ್ನಿಂಗ್!

CJP ಪ್ರತಿಭಟನೆ ವೇಳೆ ಹೆಸರು ದುರುಪಯೋಗ: 'ಬಲಪಂಥೀಯ' ಇನ್‌ಫ್ಲ್ಯುಯೆನ್ಸರ್ ವಿರುದ್ಧ ಕೇಸ್ ದಾಖಲಿಸಿದ ಚಿರಾಗ್ ಪಾಸ್ವಾನ್