ಬೈರುತ್: 2011ರಲ್ಲಿ ಭ್ರಷ್ಠಾಚಾರ, ಮೂಲಭೂತ ಸ್ವಾತಂತ್ರ್ಯ, ಆರ್ಥಿಕತೆ ಸುಧಾರಣೆಗಾಗಿ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ವಿರುದ್ಧ ಬಂಡುಕೋರರು ದಂಗೆಯೆದ್ದಿದ್ದು, ನಾಲ್ಕು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸಿರಿಯಾ ಸರ್ಕಾರ ಅಲೆಪ್ಪೋ ನಗರದ ಮೇಲೆ ನಿಯಂತ್ರಣ ಸಾಧಿಸಿದೆ.
ಉತ್ತರದ ನಗರ ಅಲೆಪ್ಪೋದ ಪೂರ್ಣ ನಿಯಂತ್ರಣವನ್ನು ಪತ್ತೆ ಪಡೆದಿರುವುದು ಸಂತಸದ ವಿಷಯವಾಗಿದೆ. ಸಿರಿಯಾದ ಅತಿ ದೊಡ್ಡ ನಗರ ಅಲೆಪ್ಪೊದ ಅರ್ಧದಷ್ಟು ಭಾಗವನ್ನು ನಾಲ್ಕು ವರ್ಷಗಳ ಕಾಲ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ಬಂಡುಕೋರರು ಇತ್ತೀಚಿನ ವಾರಗಳಲ್ಲಿ ಹಿಮ್ಮೆಟ್ಟಿದ್ದು ಸಿರಿಯಾ ಸರ್ಕಾರಿ ಪಡೆಗಳು ನಗರವನ್ನು ಸುತ್ತುವರೆದಿದ್ದು ತಮ್ಮ ಹಿಡಿತಕ್ಕೆ ತಂದುಕೊಂಡಿದೆ.
ಸದ್ಯ ಅಲೆಪ್ಪೋ ನಗರದಿಂದ 4000 ಹೆಚ್ಚು ನಿರಾಶ್ರಿತರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಸಿರಿಯಾ ಸೇನೆ ಅಲೆಪ್ಪೋ ನಗರದಲ್ಲಿನ ದಂಗೆಗಾಗಿ ಹಲವು ಯೋಧರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.