ಬಾಗ್ದಾದ್: ಮೊಸೂಲ್ ನಲ್ಲಿ ಇಸೀಸ್ ಉಗ್ರರು ನಡೆಸಿರುವ ದಾಳಿಗೆ 9 ಜನರು ಸಾವನ್ನಪ್ಪಿದ್ದಾರೆ.
ಇರಾಕ್ ನ ಮೊಸೂಲ್ ನಗರದಲ್ಲಿ ಜಿಹಾದಿ ಉಗ್ರರು ಮೋಟಾರ್ ಶೆಲ್ ದಾಳಿ ನಡೆಸಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲು ಇರಾಕ್ ಸೇನಾ ಪಡೆ ವಿಫಲವಾಗಿದ್ದು, 9 ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ಪರಿಷತ್ ಸದಸ್ಯ ಹೊಸಾಮ್ ಎಡ್ಡಿನ್ ಅಲ್-ಅಬ್ಬರ್ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಮಸೂಲ್ ನಗರದ ಈಶಾನ್ಯ ಭಾಗದಲ್ಲಿ ಇಸೀಸ್ ಉಗ್ರ ಸಂಗಘಟನೆ ದಾಳಿ ನಡೆಸಿತ್ತು. ಈ ಬೆನ್ನಲ್ಲೇ ಮತ್ತೊಂದು ದಾಳಿ ನಡೆಸಿದೆ. ಅಕ್ಟೋಬರ್ 17 ರಂದು ಇರಾಕ್ ನಲ್ಲಿರುವ ಇಸೀಸ್ ಉಗ್ರರ ಮೇಲೆ ಇರಾಕ್ ಸೇನೆ ದಾಳಿ ನಡೆಸಿ ಮೊಸೂಲ್ ನಗರವನ್ನು ವಶಪಡಿಸಿಕೊಂಡಿತ್ತು.