ವಾಷಿಂಗ್ ಟನ್: ಅಮೆರಿಕದ 45ನೇ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಡೊನಾಲ್ಡ್ ಟ್ರಂಪ್, ತಮ್ಮ ಟ್ರಂಪ್ ಫೌಂಡೇಷನ್ ನ್ನು ವಿಸರ್ಜಿಸುವುದಾಗಿ ತಿಳಿಸಿದ್ದಾರೆ.
ಜ.20 ರಂದು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಹಿತಾಸಕ್ತಿಯ ಆರೋಪ, ಘರ್ಷಣೆಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಟ್ರಂಪ್ ಈ ಕ್ರಮ ಕೈಗೊಂಡಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ತಾವು ತಮ್ಮ ಉದ್ಯಮದಿಂದ ದೂರ ಉಳಿಯುವುದಾಗಿ ಡೊನಾಲ್ಡ್ ಟ್ರಂಪ್ ಈ ಹಿಂದೆಯೇ ಘೋಷಿಸಿದ್ದರು.
ಉದ್ಯಮದಿಂದ ದೂರ ಉಳಿಯಲು ಕೈಗೊಂಡಿರುವ ಕ್ರಮಗಳನ್ನು 2017ರ ಜನವರಿ ತಿಂಗಳಲ್ಲಿ ಘೋಷಿಸುವುದಾಗಿ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಹಿತಾಸಕ್ತಿಯ ಅಪವಾದಗಳಿಂದ ದೂರಾಗಲು ಟ್ರಂಪ್ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳು ಅಗತ್ಯವಿಲ್ಲ ಎಂದು ಹಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರ ಹೊರತಾಗಿಯೂ ಆಡಳಿತದತ್ತ ಹೆಚ್ಚಿನ ಗಮನ ಹರಿಸುವ ಹಿನ್ನೆಲೆಯಲ್ಲಿ ಟ್ರಂಪ್ ತಮ್ಮ ಫೌಂಡೇಷನ್ ನ್ನು ವಿಸರ್ಜನೆ ಮಾಡುವುದಾಗಿ ತಿಳಿಸಿದ್ದಾರೆ.