ವಿದೇಶ

ಎನ್ಎಸ್ ಜಿ ಸದಸ್ಯತ್ವ ಕರಡು ನೀತಿ ತಿದ್ದುಪಡಿಗೆ ಪಾಕಿಸ್ತಾನದ ವಿರೋಧ

Srinivas Rao BV
ಇಸ್ಲಾಮಾಬಾದ್: ಅಮೆರಿಕದ ಶಸ್ತ್ರಾಸ್ತ್ರ ನಿಯಂತ್ರ ಪ್ರಾಧಿಕಾರ (ಎಸಿಎ)ದ ಅಧಿಕಾರಿಗಳು ಅಭಿಪ್ರಾಯಪಟ್ಟಿರುವಂತೆ ಎನ್ ಎಸ್ ಜಿ ಒಕ್ಕೂಟದ ಕರಡು ನೀತಿಯಲ್ಲಿ ತಿದ್ದುಪಡಿ ತರಲಾಗಿರುವುದನ್ನು ಪಾಕಿಸ್ತಾನ ವಿರೋಧಿಸಿದೆ. 
ಕರಡು ನೀತಿಯ ತಿದ್ದುಪಡಿ ತಾರತಮ್ಯದಿಂದ ಕೂಡಿದ್ದು ಸಹಕಾರಿಯಾಗಿಲ್ಲ ಎಂದು ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ. ತಿದ್ದುಪಡಿಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ನಫೀಜ್ ಜಕಾರಿಯಾ, ಎನ್ಎಸ್ ಜಿ ಕರಡು ನೀತಿ ತಿದ್ದುಪಡಿ ತಾರತಮ್ಯ ಎಸಗುತ್ತಿರುವುದು ಸ್ಪಷ್ಟವಾಗಿದ್ದು ಇದು ಯಾವುದೇ ರೀತಿಯಲ್ಲೂ ಸಹಕಾರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 
ಅಮೆರಿಕದ ಶಸ್ತ್ರಾಸ್ತ್ರ ನಿಯಂತ್ರ ಪ್ರಾಧಿಕಾರ (ಎಸಿಎ)ದ ಅಧಿಕಾರಿಗಳು ಅಭಿಪ್ರಾಯಪಟ್ಟಿರುವಂತೆ ಎನ್ ಎಸ್ ಜಿ ಒಕ್ಕೂಟದ ಕರಡು ನೀತಿಯಲ್ಲಿ ತಿದ್ದುಪಡಿ ತರಲಾಗಿದ್ದು, ನೂತನ ಕರಡು ನೀತಿಯ ಅನ್ವಯ ಭಾರತಕ್ಕೆ ಎನ್ ಎಸ್ ಜಿ  ಸದಸ್ಯತ್ವ ಪಡೆಯುವ ಎಲ್ಲ ಅರ್ಹತೆ ಇದೆ ಎಂದು ಹೇಳಿದೆ. ಎನ್ ಎಸ್ ಜಿ ಒಕ್ಕೂಟದ ಮಾಜಿ ಅಧ್ಯಕ್ಷ ರಾಫೆಲ್ ಮರಿಯಾನೋಗ್ರಾಸಿ ಸಿದ್ಧಪಡಿಸಿರುವ ಹೊಸ ನೀತಿಯ ಪ್ರಕಾರ  ಎನ್ ಎಸ್ ಜಿ ಸದಸ್ಯ ಬಯಸುವ ರಾಷ್ಟ್ರ ಬೇರೊಂದು ಸದಸ್ಯವಲ್ಲದ ರಾಷ್ಟ್ರಕ್ಕೆ ಸದಸ್ಯತ್ವ ಸಿಗದಂತೆ ತಡೆ ಒಡ್ಡಿದರೆ ಆ ರಾಷ್ಟ್ರ ಎನ್ ಎಸ್ ಜಿ ಸದಸ್ಯತ್ವ ಪಡೆಯುವ ಅರ್ಹತೆ ಕಳೆದುಕೊಳ್ಳುತ್ತದೆ ಎಂಬ ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ. ಭಾರತದ ಸೇರ್ಪಡೆಗೆ ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಿರುವ ಪಾಕಿಸ್ತಾನ ಈಗ ಹೊಸ ನೀತಿಗಳಿಗೆ ವಿರೋಧ ವ್ಯಕ್ತಪಡಿಸಿದೆ. 
SCROLL FOR NEXT