ಮೆಲ್ಬೋರ್ನ್: ಭಾರತದ ನೂತನ ಆಸ್ಟ್ರೇಲಿಯಾ ಹೈ ಕಮಿಷನರ್ ಆಗಿ ಭಾರತೀಯ ಮೂಲದ ಮಹಿಳೆ ಹರಿಂದರ್ ಸಿಧು ಅವರು ಗುರುವಾರ ನೇಮಗೊಂಡಿದ್ದಾರೆ.
ಹರಿಂದರ್ ಸಿಧು ಅವರು ಆಸ್ಟ್ರೇಲಿಯಾದ ವ್ಯಾಪಾರ ಮತ್ತು ವಿದೇಶ ವ್ಯವಹಾರಗಳ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಬಹುಪಕ್ಷೀಯ ನೀತಿ ವಿಭಾಗದ ಪ್ರಥಮ ಸಹಾಯಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಹರಿಂದರ್ ಸಿಧು ಅವರು ಮೂಲತಃ ಭಾರತದವರಾಗಿದ್ದು, ಅವರ ಕುಟುಂಬ ಆಸ್ಟ್ರೇಲಿಯಾದಲ್ಲಿ ನೆಲೆಯೂರಿದೆ. ಸಿಧು ಅವರು ಸಿಡ್ನಿ ವಿಶ್ವವಿದ್ಯಾಲಯದ ಕಾನೂನು ಮತ್ತು ಅರ್ಥಶಾಸ್ತ್ರ ಪದವಿ ಪಡೆದಿದ್ದಾರೆ.
ಇಂಡೋ-ಪ್ಯಾಸಿಫಿಕ್ ಪ್ರದೇಶದಲ್ಲಿ ಭಾರತವು ಆಸ್ಟ್ರೇಲಿಯಾದ ಪ್ರಮುಖ ಪಾಲುದಾರರಲ್ಲಿ ಒಂದಾಗಿದ್ದು, ಆಸ್ಟ್ರೇಲಿಯಾದ 10ನೇ ಅತಿ ದೊಡ್ಡ ವ್ಯಾಪರ ಪಾಲುದಾರ ಆಗಿದೆ. ಪ್ರಸ್ತುತ ಎರಡೂ ದೇಶಗಳ ಮಧ್ಯೆ 90 ಬಿಲಿಯನ್ ಡಾಲರ್ ಹೂಡಿಕೆಯಾಗಿದೆ ಎಂದು ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳ ಸಚಿವೆ ಜ್ಯೂಲಿ ಬಿಷಪ್ ತಿಳಿಸಿದ್ದಾರೆ.