ಟೊರೊಂಟೊ; ಸಾರ್ವಜನಿಕರ ಶಾಂತಿಗೆ ಭಂಗವುಂಟು ಮಾಡಿದ್ದಾನೆಂದು ಹೇಳಿ ಕೆನಡದಲ್ಲಿ ನೆಲೆಯೂರಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಬುಧವಾರ ತಿಳಿದುಬಂದಿದೆ.
ಪರ್ಮ್ಪಲ್ ಗಿಲ್ (32) ಬಂಧನಕ್ಕೊಳಗಾದ ವ್ಯಕ್ತಿಯಾಗಿದ್ದು, ಈತ ಕೆನಡಾದ ಒಂಟಾರಿಯೋದಲ್ಲಿ ನೆಲೆಯೂರಿದ್ದಾರೆ. ನಿನ್ನೆ ಬ್ರಾಮ್ಪೊಟಾನ್ ನಗರದ ಬಳಿ ವ್ಯಕ್ತಿಯೊಬ್ಬನ ಬಳಿ ಜಗಳಕ್ಕಿಳಿದಿದ್ದ ಈತ ಇದ್ದಕ್ಕಿದ್ದಂತೆ ಆ ವ್ಯಕ್ತಿಗೆ ಜೀವ ಬೆದರಿಕೆ ಹಾಕಿದ್ದಾನೆಂಬ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ ಎಂದು ತಿಳಿದುಬಂದಿದೆ.
ಇದೀಗ ಭಾರತೀಯ ಮೂಲದ ವ್ಯಕ್ತಿಯ ವಿರುದ್ಧ ಸಾರ್ವಜನಿಕ ಶಾಂತಿಗೆ ಭಂಗ, ಉದ್ದೇಶಪೂರ್ವಕವಾಗಿ ಶಸ್ತ್ರಾಸ್ತ್ರ ಬಳಕೆ, ಸಾವು ಹಾಗೂ ದೈಹಿಕ ಹಾನಿ ಬೆದರಿಕೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.