ಪಟಾಣ್ ಕೋಟ್ ದಾಳಿ: ಪಾಕ್ ನಿಂದ ಭಾರತಕ್ಕೆ ಪೂರ್ಣ ಸಹಕಾರ
ಪಟಾಣ್ ಕೋಟ್ ದಾಳಿ ತನಿಖೆಗೆ ಸಂಬಂಧಿಸಿದಂತೆ ಭಾರತಕ್ಕೆ ಪಾಕಿಸ್ತಾನ ಪೂರ್ಣ ರೀತಿ ಸಹಕಾರ ನೀಡಿದೆ ಎಂದು....
ಇಸ್ಲಾಮಾಬಾದ್: ಪಟಾಣ್ ಕೋಟ್ ದಾಳಿ ತನಿಖೆಗೆ ಸಂಬಂಧಿಸಿದಂತೆ ಭಾರತಕ್ಕೆ ಪಾಕಿಸ್ತಾನ ಪೂರ್ಣ ರೀತಿ ಸಹಕಾರ ನೀಡಿದೆ ಎಂದು ಪಾಕಿಸ್ತಾನದ ವಿದೇಶಿ ಕಾರ್ಯಾಲಯದ ವಕ್ತಾರ ಹೇಳಿದ್ದಾರೆ.
ಪಾಕಿಸ್ತಾನದ ವಿದೇಶ ಕಾರ್ಯಾಲಯದ ವಕ್ತಾರ ಝಕಾರಿಯಾ ಮಾತನಾಡಿ, ಪಟಾನ್ ಕೋಟ್ ಘಟನೆ ಸಂಬಂಧ ಪಾಕಿಸ್ತಾನ ಭಾರತಕ್ಕೆ ಪೂರ್ಣ ರೀತಿಯಲ್ಲಿ ಸಹಕಾರ ನೀಡುತ್ತಿದ್ದು, ಅದನ್ನು ಮುಂದುವರಿಸಲಿದೆ ಎಂದಿದ್ದಾರೆ.
ಪಠಾಣ್ಕೋಟ್ನಲ್ಲಿರುವ ಸೇನೆಯ ವಾಯುನೆಲೆಯ ಮೇಲೆ ಜನವರಿ 2ರಂದು ಉಗ್ರರು ದಾಳಿ ನಡೆಸಿದ್ದರು. ಸೇನಾ ಪಡೆ ನಡೆಸಿದ ಪ್ರತಿದಾಳಿಯಲ್ಲಿ 6 ಮಂದಿ ಉಗ್ರರು ಮೃತಪಟ್ಟಿದ್ದರು. ಕಾರ್ಯಾಚರಣೆಯಲ್ಲಿ ವಾಯುಸೇನೆಯ ಏಳು ಯೋಧರು ಮತ್ತು ಓರ್ವ ನಾಗರಿಕ ಮೃತಪಟ್ಟಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.