ವಿದೇಶ

ಚೀನಾದಲ್ಲಿ "ಎಲ್ಲೋ ಅಲರ್ಟ್"; ಮುಂದುವರೆದ ಅಲರ್ಟ್ ಸರಣಿ

Srinivasamurthy VN

ಬೀಜಿಂಗ್: ಚೀನಾ ರಾಜಧಾನಿ ಬೀಜಿಂಗ್ ನಲ್ಲಿ ವಾಯುಮಾಲಿನ್ಯ ಪ್ರಮಾಣ ಮಿತಿ ಮೀರಿದ್ದು, ಚೀನಾ ಸರ್ಕಾರ ಭಾನುವಾರ ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ.

ಚೀನಾದಲ್ಲಿ ವಾಯು ಮಾಲಿನ್ಯದ ಎಚ್ಚರಿಕೆಯನ್ನು 4 ವಿಭಾಗಗಳಾಗಿ ವಿಂಗಡಿಸಿದ್ದು, ರೆಡ್ ಅಲರ್ಟ್ ಅತಿ ಕೆಟ್ಟ ವಾತಾವರಣದ ಮುನ್ಸೂಚನೆಯಾಗಿದೆ. ನಂತರ ಆರೆಂಜ್, ಎಲ್ಲೋ ಮತ್ತು ಬ್ಲೂ  ಅಲರ್ಟ್​ಗಳಿವೆ. ನಿನ್ನೆ ಆರೆಂಜ್ ಆಲರ್ಟ್ ಘೋಷಣೆ ಮಾಡಿದ್ದ ಚೀನಾ ಸರ್ಕಾರ ಇಂದು ಅದಕ್ಕಿಂತಲೂ ಹೆಚ್ಚು ಅಂದರೆ ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ.

ಹವಾಮಾನ ಇಲಾಖೆಯ  ಮೂಲಗಳ ಪ್ರಕಾರ ಸೋಮವಾರವೂ ಪರಿಸ್ಥಿತಿ ಹೀಗೆ ಮುಂದುವರಿಯಲಿದ್ದು, ಮನೆಯಿಂದ ಹೊರಗೆ ಬರದಂತೆ ಮತ್ತು ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಹಲವು ನಗರಗಳಲ್ಲಿ ಎಚ್ಚರಿಕೆ  ರವಾನಿಸಲಾಗಿದೆ.

ಬೀಜಿಂಗ್ ನ ಕೆಲ ಪ್ರಮುಖ ಪ್ರದೇಶಗಳೂ ಸೇರಿದಂತೆ ಚೀನಾದ ಕೆಲವು ನಗರಗಳಲ್ಲಿ ಕಳೆದ ರಾತ್ರಿ ‘ರೆಡ್ ಅಲರ್ಟ್’ ಘೋಷಣೆ ಮಾಡಲಾಗಿತ್ತು.

SCROLL FOR NEXT