ವಿದೇಶ

ಸೌದಿ ವಿರುದ್ಧ ಇರಾನ್ ಕೆಂಡ

Mainashree
ಟೆಹರಾನ್/ರಿಯಾದ್: ಶಿಯಾ ಧರ್ಮ ಗುರು ಶೇಕ್ ನಿಮ್ರ್ ಅಲ್ ನಿಮ್ರ್ ಅವರಿಗೆ ಸೌದಿ ಅರೇಬಿಯಾ ಗಲ್ಲು ಶಿಕ್ಷೆ ವಿಧಿಸಿದ್ದನ್ನು ಖಂಡಿಸಿ ಇರಾನ್ ಉದ್ವಿಗ್ನಗೊಂಡಿದೆ. 
ಟೆಹರಾನ್‍ನಲ್ಲಿರುವ ಸೌದಿ ಅರೇಬಿಯಾ ರಾಯಭಾರ ಕಚೇರಿಗೆ ಉದ್ರಿಕ್ತರು ನುಗ್ಗಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತು ಇತರ ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರನ್ನು ತೆರವುಗೊಳಿಸಿದ್ದಾರೆ. 
``ಸೌದಿ ಅರೇಬಿಯಾ ಮುಂದಿನ ದಿನಗಳಲ್ಲಿ ಧಾರ್ಮಿಕ ಪ್ರತೀಕಾರ (ಡಿವೈನ್ ರಿವೇಂಜ್) ಎಂದು ಎದುರಿಸಲಿದೆ. ಅವರು ಮಾಡಿದ ಒಂದೇ ತಪ್ಪೆಂದರೆ ಅಲ್ಲಿನ ಸರ್ಕಾರದ ಜನ ವಿರೋಧಿ ನೀತಿಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಿದ್ದು,'' ಎಂದು ಇರಾನ್ ಧಾರ್ಮಿಕ ನಾಯಕ ಆಯತೊಲ್ಲ ಅಲಿ ಖಮೇನಿ ಎಚ್ಚರಿಕೆ ನೀಡಿದ್ದಾರೆ.
SCROLL FOR NEXT