ವಿದೇಶ

ಢಾಕಾ ಉಗ್ರ ದಾಳಿ ಕಾರ್ಯಾಚರಣೆ ಅಂತ್ಯ: 6 ಸಾವು, 18 ಒತ್ತೆಯಾಳು ಬಂಧಮುಕ್ತ

Vishwanath S

ಢಾಕಾ: ಢಾಕಾದ ಆರ್ಟಿಸನ್ ರೆಸ್ಟೋರೆಂಟ್ ಮೇಲಿನ ಉಗ್ರ ದಾಳಿಯನ್ನು ಬಾಂಗ್ಲಾದೇಶ ಭದ್ರತಾ ಪಡೆ ಯೋಧರು ಅಂತ್ಯಗೊಳಿಸಿದ್ದಾರೆ. ಕಾರ್ಯಾಚರಣೆ ವೇಳೆ ರೆಸ್ಟೋರೆಂಟ್ ನಲ್ಲಿ 5 ಮೃತದೇಹಗಳು ಪತ್ತೆಯಾಗಿದ್ದು. ಅವರ ಗುರುತು ಪತ್ತೆಯಾಗಿಲ್ಲ.

ಢಾಕಾದ ದೂತವಾಸ ವಲಯದಲ್ಲಿರುವ ರೆಸ್ಟೋರೆಂಟ್ ಮೇಲೆ ಉಗ್ರ ದಾಳಿ ಹಿನ್ನೆಲೆ ಕಳೆದ ರಾತ್ರಿಯಿಂದ ಕಾರ್ಯಾಚರಣೆ ಕೈಗೊಂಡಿದ್ದ ಭದ್ರತಾ ಪಡೆ ಯೋಧರು ಸತತ 14 ಗಂಟೆಗಳ ನಂತರ ಕಾರ್ಯಾಚರಣೆ ಅಂತ್ಯಗೊಳಿಸಿದ್ದಾರೆ. ಉಗ್ರರು ಒತ್ತೆ ಇರಿಸಿಕೊಂಡಿದ್ದ 18 ಮಂದಿಯನ್ನು ರಕ್ಷಿಸಲಾಗಿದ್ದು, ಆಂಬ್ಯುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

100 ಕಮಾಂಡರ್ ಗಳು ಸುಧೀರ್ಘ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಯೋಧರು ಐವರು ಉಗ್ರರನ್ನು ಹತ್ಯೆ ಮಾಡಿದ್ದು, ಇಬ್ಬರು ಉಗ್ರರನ್ನು ಜೀವಂತವಾಗಿ ಸೆರೆ ಹಿಡಿದ್ದಾರೆ ಎನ್ನಲಾಗುತ್ತಿದೆ. ಇಬ್ಬರು ಉಗ್ರರು ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರ ಬಂಧನಕ್ಕೆ ಯೋಧರು ಕಾರ್ಯಚರಣೆ ಕೈಗೊಂಡಿದ್ದಾರೆ.

ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಶಸ್ತ್ರಸರ್ಜಿತ ಬಂದೂಕುಧಾರಿಗಳು ರೆಸ್ಟೋರೆಂಟ್ ಮೇಲೆ ದಾಳಿ ಮಾಡಿ 20ಕ್ಕೂ ಹೆಚ್ಚು ವಿದೇಶಿಗರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು.

SCROLL FOR NEXT