ಅವಳಿ ಮಕ್ಕಳು 
ವಿದೇಶ

ಇಸಿಸ್ ಸೇರಲು ಅಡ್ಡಿಯಾದ ತಾಯಿಯನ್ನೇ ಕೊಂದ ಅವಳಿಗಳು

ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಲು ಯುವಕರು ತವಕಿಸುತ್ತಿದ್ದಾರೆ. ಅಂತೆ ಸೌದಿ ಅರೇಬಿಯಾದಲ್ಲಿ ಅವಳಿ ಯುವಕರು ಇಸಿಸ್ ಸೇರಲು ತಡೆದ ತಾಯಿಯನ್ನೇ ಕೊಲೆ...

ದುಬೈ: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಲು ಯುವಕರು ತವಕಿಸುತ್ತಿದ್ದಾರೆ. ಅಂತೆ ಸೌದಿ ಅರೇಬಿಯಾದಲ್ಲಿ ಅವಳಿ ಯುವಕರು ಇಸಿಸ್ ಸೇರಲು ತಡೆದ ತಾಯಿಯನ್ನೇ ಕೊಲೆ ಮಾಡಿದ್ದಾರೆ.

ಜೂನ್ 24 ರಂದು ಸೌದಿಯಲ್ಲಿ ಈ ಭೀಭತ್ಸ ಕೃತ್ಯ ನಡೆದಿದ್ದು ಸೌದಿ ಅರೇಬಿಯಾ ಮಂದಿ ಚಿಂತೆಗೀಡಾಗುವಂತೆ ಮಾಡಿದೆ. ಸಣ್ಣ ಪುಟ್ಟ ತಪ್ಪುಗಳಿಗೆ ಸೌದಿಯಲ್ಲಿ ಘೋರ ಶಿಕ್ಷೆ ನೀಡಲಾಗುತ್ತದೆ. ಅಂತಹದರಲ್ಲಿ ಈ ಅವಳಿಗಳು ಯಾವುದೇ ಭಯವಿಲ್ಲದೆ ತನ್ನ ತಾಯಿಯನ್ನೇ ದಾರುಣವಾಗಿ ಕೊಲೆ ಮಾಡಿದ್ದಾರೆ.

ಖಲೀದ್ ಮತ್ತು ಸಲ್ಹೆ ಅಲ್ ಒರೈನಿ ಅವಳಿ ಯುವಕರು 67 ವರ್ಷದ ಹೈಲಾರನ್ನು ಕೊಲೆ ಮಾಡಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ಅವಳಿಗಳಿಬ್ಬರನ್ನು ಬಂಧಿಸಿದ್ದಾರೆ.

ಇತ್ತೀಚೆಗೆ ಯುವ ಮನಸ್ಸುಗಳು ಕ್ರೋಧದೆಡೆ ವಾಲುತ್ತಿದ್ದು, ಮೊನ್ನೆ ಮೊನ್ನೆ ನಡೆದ ಢಾಕಾ ಉಗ್ರ ದಾಳಿ ಇದಕ್ಕೆ ಸಾಕ್ಷಿಯಾಗಿದೆ. ಅಲ್ಲಿ ದಾಳಿ ನಡೆಸಿದ ಯುವಕರು ಉತ್ತಮ ಶಿಕ್ಷಣ ಪಡೆದಿದ್ದರು. ಇಂತ ಯುವ ಮನಸ್ಸುಗಳನ್ನು ತಮ್ಮ ಸಂಘಟನೆಗೆ ಸೇರಿಸಿಕೊಳ್ಳಲು ಇಸಿಸ್ ಸಹ ಸಾಮಾಜಿಕ ಜಾಲತಾಣಗಳನ್ನು ಅದ್ಭುತವಾಗಿ ಬಳಸಿಕೊಳ್ಳುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ