ನರೇಂದ್ರ ಮೋದಿ 
ವಿದೇಶ

ಭಾರತದ ಆರ್ಥಿಕಾಭಿವೃದ್ಧಿ ದರ ಶೇ.7.5 ಅತಿಶಯದ್ದು: ಅಮೆರಿಕ

ಭಾರತದ ಆರ್ಥಿಕ ಅಭಿವೃದ್ಧಿ ದರ ಶೇ.7.5ರಷ್ಟು ಎಂದರೆ ಅದು ಅತಿಶಯವಾಗುತ್ತದೆ ಎಂದು ಅಮೆರಿಕ ಹೇಳಿದೆ. ಅಲ್ಲದೆ ಆರ್ಥಿಕ ಸುಧಾರಣೆಗೆ...

ವಾಷಿಂಗ್ಟನ್‌: ಭಾರತದ ಆರ್ಥಿಕ ಅಭಿವೃದ್ಧಿ ದರ ಶೇ.7.5ರಷ್ಟು ಎಂದರೆ ಅದು ಅತಿಶಯವಾಗುತ್ತದೆ ಎಂದು ಅಮೆರಿಕ ಹೇಳಿದೆ. ಅಲ್ಲದೆ ಆರ್ಥಿಕ ಸುಧಾರಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಾತು ಮತ್ತು ಕೃತಿಯ ನಡುವೆ ಅಂತರವಿದೆ ಎಂದಿದೆ.
ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸುವಲ್ಲಿ ಮೋದಿ ಸರ್ಕಾರ ತುಂಬಾ ನಿಧಾನವಾಗಿದೆ. ಆದರೆ ನೇರ ವಿದೇಶಿ ಹೂಡಿಕೆ ಮತ್ತು ತ್ವರಿತ ಆಡಳಿತಾತ್ಮಕ ನಿರ್ಧಾರಗಳಲ್ಲಿ ಮೋದಿ ಸರ್ಕಾರ ತಂದಿರುವ ಸುಧಾರಣೆಗಳು ಪ್ರಶಂಸನೀಯವಾಗಿವೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವರದಿ ತಿಳಿಸಿದೆ.
ನರೇಂದ್ರ ಮೋದಿ ಸರ್ಕಾರ ತರಲು ಬಯಸಿರುವ ಹಲವಾರು ಬಗೆಯ ಆರ್ಥಿಕ ಸುಧಾರಣೆಗಳು ಸಂಸತ್ತಿನಲ್ಲಿ ಅನುಮೋದನೆಗೊಳ್ಳಬೇಕಿವೆ ಎಂದು ಅಮೆರಿಕ ವಿದೇಶಾಂಗ ಸಚಿವಾಲಯವು ಸಿದ್ಧಪಡಿಸಿರುವ "2016ರ ಹೂಡಿಕೆ ಸನ್ನಿವೇಶ' ಶೀರ್ಷಿಕೆಯ ವರದಿ ಹೇಳಿದೆ.
ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರದ ಬೆಂಬಲಕ್ಕೆ ನಿಂತಿದ್ದ ಅನೇಕ ಹೂಡಿಕೆದಾರರು, ಈಗ ಮೋದಿ ಸರ್ಕಾರಕ್ಕೆ ಕ್ರಾಂತಿಕಾರಕ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಇರುವ ಸಂಸದೀಯ ಅಡಚಣೆಗಳಿಂದ ಭ್ರಮನಿರಸನಗೊಂಡು ಹಿಂದೆ ಸರಿಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಭಾರತದ ಜಿಡಿಪಿ ಅಂಕಿ ಅಂಶಗಳ ನಿಜ ಬಣ್ಣ ಬಯಲಾದರೆ ಭಾರೀ ರಾಜಕೀಯ ಗೊಂದಲ, ಕ್ಷೋಭೆ ಉಂಟಾದೀತು ಎಂದು ಈಚೆಗೆ ಬಿಜೆಪಿಯ ನೂತನ ರಾಜ್ಯಸಭಾ ಸದಸ್ಯ, ವಿವಾದಾತ್ಮಕ ನಾಯಕ, ಸುಬ್ರಹ್ಮಣ್ಯನ್‌ ಸ್ವಾಮಿ ಅವರು ಹೇಳಿದ್ದ ಮಾತು ಇದೀಗ ಅಮೆರಿಕದ ಈ ಹೇಳಿಕೆಯಿಂದಾಗಿ ಪುಷ್ಟಿ ಪಡೆದಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ