13 ಮಂದಿ ಪತ್ನಿಯರೊಂದಿಗೆ ನೈಜೀರಿಯಾ ವ್ಯಕ್ತಿ
ನವದೆಹಲಿ: ಓರ್ವ ವ್ಯಕ್ತಿ ಹಲವು ಮದುವೆಯಾಗಿದ್ದನ್ನು ಕೇಳಿದ್ದೇವೆ, ನೋಡಿದ್ದೇವೆ. ಆ ಪತ್ನಿಯರೊಂದಿಗೆ ಮಕ್ಕಳಾಗಿದ್ದನ್ನೂ ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಒಂದಲ್ಲ, ಎರಡಲ್ಲ ಬರೋಬ್ಬರಿ 13 ಮದುವೆಯಾಗಿದ್ದಾನೆ. ಇನ್ನೊಂದು ಕುತೂಹಲಕಾರಿ ವಿಷಯವೆಂದರೆ ಈ ಎಲ್ಲಾ ಪತ್ನಿಯರೂ ಗರ್ಭ ಧರಿಸಿದ್ದಾರೆ. ಈ ವ್ಯಕ್ತಿ ತನ್ನ ಗರ್ಭಿಣಿ ಪತ್ನಿಯರೊಂದಿಗೆ ನಿಂತು ಫೋಸು ನೀಡಿರುವ ಫೋಟೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
ಈತ ನೈಜೀರಿಯಾದ ವ್ಯಕ್ತಿ. ಎಲ್ಲ ಪತ್ನಿಯರೂ ಸಾಮರಸ್ಯದಿಂದಿದ್ದಾರೆ, ಅವರೆಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನಂತೆ. ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರಂತೆ. ಫೋಟೋದಲ್ಲಿ ಕೂಡ 13 ಮಹಿಳೆಯರು ಕೂಡಾ ಸಂತಸದಿಂದ ಇರುವಂತೆ ಕಂಡುಬಂದಿದೆ. ಮಾಧ್ಯಮದ ವರದಿ ಪ್ರಕಾರ ಅಷ್ಟೂ ಪತ್ನಿಯರ ಹೆರಿಗೆ ದಿನಾಂಕದಲ್ಲಿ ಮೂರರಿಂದ ಐದು ವಾರಗಳ ವ್ಯತ್ಯಾಸವಿದೆಯಷ್ಟೆಯಂತೆ.
ನೈಜೀರಿಯಾದಲ್ಲಿ ಬಹುಪತ್ನಿತ್ವ ಹೊಂದುವುದು ಕಾನೂನು ಪ್ರಕಾರ ಮಾನ್ಯವಾದರೂ, ಪತ್ನಿಯರೆಲ್ಲರು ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಗರ್ಭ ಧರಿಸಿ ವಿಶ್ವದ ಜನರನ್ನೇ ಹುಬ್ಬೇರಿಸಿದ್ದಾರೆ.