ಸೈಬೀರಿಯಾ: ರೈಲ್ವೆ ಹಳಿಯ ಪಕ್ಕದಲ್ಲಿ ಸೆಕ್ಸ್ ಮಾಡುತ್ತಿದ್ದ ಮಹಿಳೆ ತಲೆಯನ್ನು ವೇಗವಾಗಿ ಬಂದ ರೈಲೊಂದು ಕತ್ತರಿಸಿಕೊಂಡು ಹೋಗಿರುವ ಘಟನೆ ಸೈಬಿರಿಯಾದಲ್ಲಿ ನಡೆದಿದೆ.
ಸೈಬೀರಿಯಾದ ಬುರ್ಯಾತಿಯಾ ಝೌಡಿನ್ ಸ್ಕಯಾ ರೈಲು ನಿಲ್ದಾಣ ಸಮೀಪದ ವಿಶ್ವ ಪ್ರಸಿದ್ದ ಟ್ರಾನ್ಸ್ ಸೈಬಿರಿಯಾ ರೈಲು ಹಳಿಯಲ್ಲಿ ಜೋಡಿಯೊಂದು ಸೆಕ್ಸ್ ನಲ್ಲಿ ನಿರತವಾಗಿತ್ತು. ಮಹಿಳೆ ಪ್ರಿಯತಮನ ಮೇಲೆ ಮಲಗಿದ್ದಳು. ಈ ವೇಳೆ ರೈಲು ಬಂದಿದೆ. ಪ್ರಿಯಕರನೊಂದಿಗೆ ಸೆಕ್ಸ್ ನಡೆಸುತ್ತಿದ್ದ ಮಹಿಳೆಯು ರೈಲಿನ ಸದ್ದನ್ನು ಕೇಳುತ್ತಲೇ ಎದ್ದು ನಿಂತಿದ್ದಾಳೆ. ಆಕೆ ಎದ್ದು ನಿಲ್ಲುತ್ತಿದ್ದಂತೆ ಭಾರೀ ವೇಗದಲ್ಲಿ ಬಂದ ರೈಲು ಆಕೆಯನ್ನು ಬಲಿ ತೆಗೆದುಕೊಂಡಿದೆ. ಇದರಿಂದ ಕ್ಷಣಾರ್ಧದಲ್ಲಿ ಆಕೆಯ ಶಿರಚ್ಛೇದನವಾಗಿದೆ.
ಸೆಕ್ಸ್ ನಿರತ ಜೋಡಿ ವಾಸಿಸಲು ಮನೆ ಇಲ್ಲದವರಾಗಿದ್ದು, ಇಬ್ಬರೂ ಕಂಠ ಪೂರ್ತಿ ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಆಕೆಯ ಜೊತೆಗಿದ್ದ ಪುರುಷ ಅಪಾಯದಿಂದ ಪಾರಾಗಿದ್ದಾನೆ.