ನವದೆಹಲಿ: ಸಹೋದರನಿಂದಲೇ ಕೊಲೆಯಾದ ಪಾಕಿಸ್ತಾನದ ರೂಪದರ್ಶಿ ಕಂದೀಲ್ ಬಲೋಚ್ ಭಾರತೀಯ ಪೌರತ್ವ ಬಯಸಿದ್ದಳು. ಪಾಕಿಸ್ತಾನದಿಂದ ನಿರಾಸೆಯಾಗಿರುವ ಕಾರಣ ಭಾರತದ ಪೌರತ್ವ ಬೇಕಿದೆ ಎಂದು ರೂಪದರ್ಶಿ ಟ್ವೀಟ್ ಮಾಡಿದ್ದಳು.
ಪಾಕಿಸ್ತಾನದ ಜನತೆ ನನ್ನನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಭಾರತದಲ್ಲಿ ಕೆಲಸ ಮಾಡುವುದು ಬಹಳ ಸುಲಭ. ಹೀಗಾಗಿ ನನಗೆ ಭಾರತೀಯ ಪೌರತ್ವ ನೀಡಿ ಎಂದು ಟ್ವೀಟ್ ಮಾಡಿದ್ದ ಕಂದೀಲ್ ಅದನ್ನು ಪ್ರಧಾನಿ ಮೋದಿ ಅವರಿಗೆ ಟ್ಯಾಗ್ ಮಾಡಿದ್ದಳು.
ಸಾಮಾಜಿಕ ಜಾಲತಾಣಗಳಲ್ಲಿ ಆಕೆ ಬೋಲ್ಡ್ ಚಿತ್ರಗಳು, ವೀಡಿಯೋಗಳ ಬಗ್ಗೆ ಕುಟುಂಬದವರಿಂದಲೇ ಆಕ್ಷೇಪವಿತ್ತು. ಈ ವಿಚಾರವಾಗಿ ಆಕೆ ಬೆದರಿಕೆಯನ್ನೂ ಎದುರಿಸುತ್ತಿದ್ದಳು. ಮೂರು ವಾರಗಳ ಹಿಂದೆ ಆಕೆ ಒಳಾಡಳಿತ ಸಚಿವರು, ಎಫ್‌ಐಎ ಮಹಾ ನಿರ್ದೇಶಕರು ಹಾಗೂ ಇಸ್ಲಾಮಾಬಾದ್‌ನ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಪತ್ರ ಬರೆದು, ಭದ್ರತೆ ಒದಗಿಸಲು ಕೋರಿದ್ದಳು.